ಮುಂಬೈ: ಖ್ಯಾತ ಬಾಲಿವುಡ್ ನಟ, ರಂಗಭೂಮಿ ಕಲಾವಿದ ನವಾಜುದ್ದೀನ್ ಸಿದ್ದಿಕಿ ವಿರುದ್ಧ ಪತ್ನಿಯೇ ರೇಪ್ ಕೇಸ್ ದಾಖಲಿಸಿದ್ದಾರೆ.
ಇವರಿಬ್ಬರ ನಡುವೆ ಹಲವು ಸಮಯದ ಹಿಂದೆಯೇ ವಿರಸ ಮೂಡಿತ್ತು. ನವಾಜುದ್ದೀನ್ ವಿರುದ್ಧ ಪತ್ನಿ ಅಲಿಯಾ ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು.
ಇದೀಗ ಪತ್ನಿ ಅಲಿಯಾ ಪತಿಯ ವಿರುದ್ಧವೇ ರೇಪ್ ಕೇಸ್ ದಾಖಲಿಸಿದ್ದಾರೆ. ನವಾಜುದ್ದೀನ್ ನನಗೆ ಅನ್ನ, ನೀರು ಕೊಡದೇ ಹಿಂಸಿಸಿದ್ದಾರೆ. ಲೈಂಗಿಕವಾಗಿ ದೌರ್ಜನ್ಯ ನಡೆಸಿದ್ದಾರೆ. ಮಕ್ಕಳನ್ನೂ ತಮ್ಮ ಬಳಿಯಿಂದ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅಲಿಯಾ ದೂರಿದ್ದಾರೆ.