Publish Date: Sat, 08 Feb 2020 (10:08 IST)
Updated Date: Sat, 08 Feb 2020 (10:10 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ರೂಮರ್ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇದೆ.
ಇದರ ಬಗ್ಗೆ ಪದೇ ಪದೇ ಪತ್ರಕರ್ತರು ಪ್ರಶ್ನೆ ಮಾಡುವುದು ನಟ ಸುನಿಲ್ ಶೆಟ್ಟಿಗೆ ಸಿಟ್ಟು ತರಿಸಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಪತ್ರಕರ್ತರು ಇದೇ ಪ್ರಶ್ನೆ ಕೇಳಿದಾಗಿ ಸಿಟ್ಟಿನಿಂದಲೇ ಪ್ರತಿಕ್ರಿಯಿಸಿದ್ದಾರೆ.
‘ನಾನು ಯಾವುದೇ ರಿಲೇಷನ್ ಶಿಪ್ ನಲ್ಲಿ ಇಲ್ಲ. ನೀವು ಅಥಿಯಾಳನ್ನು ಈ ಬಗ್ಗೆ ಕೇಳಬೇಕು. ಇದು ಸತ್ಯವಾದರೆ ನೀವು ನನ್ನ ಬಳಿಗೆ ಬನ್ನಿ, ಮಾತನಾಡೋಣ. ನಿಮಗೆ ಗೊತ್ತಿಲ್ಲದೇ ಇದ್ದರೆ ಯಾಕೆ ಈ ಬಗ್ಗೆ ಮಾತನಾಡುತ್ತೀರಿ?’ ಎಂದು ಸಿಟ್ಟಾಗಿಯೇ ಪ್ರತಿಕ್ರಿಯಿಸಿದ್ದಾರೆ.