ಅನುಷ್ಕಾ ಶರ್ಮಾ ಎದುರೇ ವಿರಾಟ್ ಕೊಹ್ಲಿ ಬಗ್ಗೆ ಇದೇನು ಹೇಳಿಬಿಟ್ಟರು ಶಾರುಖ್ ಖಾನ್?!

ಸೋಮವಾರ, 24 ಡಿಸೆಂಬರ್ 2018 (09:15 IST)
ಮುಂಬೈ: ಇತ್ತೀಚೆಗಷ್ಟೇ ಜೀರೋ ಚಿತ್ರದ ಪ್ರಮೋಷನಲ್ ಕಾರ್ಯಕ್ರಮದಲ್ಲಿ ಕ್ರಿಕೆಟಿಗರ ಬಗ್ಗೆ ಅನುಷ್ಕಾ ಎದುರು ಮಾತನಾಡಲ್ಲ ಎಂದಿದ್ದ ಶಾರುಖ್ ಖಾನ್ ಇದೀಗ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ.


ಕಾರ್ಯಕ್ರಮವೊಂದರಲ್ಲಿ ತೆರೆ ಮೇಲೆ ಒಬ್ಬ ಕ್ರಿಕೆಟಿಗನ ಪಾತ್ರ ನಿರ್ವಹಿಸಬೇಕಾದರೆ ಯಾವ ಕ್ರಿಕೆಟಿಗನ ಪಾತ್ರ ನಿಭಾಯಿಸಲು ಬಯಸುತ್ತೀರಿ ಎಂದು ಶಾರುಖ್ ಗೆ ಪ್ರಶ್ನೆ ಎದುರಾಯಿತು. ಈ ಕಾರ್ಯಕ್ರಮದಲ್ಲಿ ಅನುಷ್ಕಾ ಕೂಡಾ ಉಪಸ್ಥಿತರಿದ್ದರು.

ತಮ್ಮ ಜತೆ ಕುಳಿತಿದ್ದ ಅನುಷ್ಕಾ ಕಡೆ ನೋಡಿದ ಶಾರುಖ್ ನಾನು ವಿರಾಟ್ ಕೊಹ್ಲಿ ಪಾತ್ರ ನಿಭಾಯಿಸಲು ಬಯಸುತ್ತೇನೆ ಎಂದಿದ್ದಾರೆ. ಇದಕ್ಕೆ ಅನುಷ್ಕಾ ಹಾಗಿದ್ದರೆ ನೀವು ಗಡ್ಡ ಬಿಡಬೇಕಾಗುತ್ತದೆ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಶಾರುಖ್ ಕೂಡಾ ‘ನಾನು ಜಬ್ ಹ್ಯಾರಿ ಮೆಟ್ ಸೆಜಾಲೋ’ ಸಿನಿಮಾದಲ್ಲಿ ದಾಡಿ ಬಿಟ್ಟಿದ್ದೆನಲ್ಲ. ಆಗ ನಾನು ಥೇಟ್ ವಿರಾಟ್ ರಂತೇ ಕಾಣುತ್ತಿದ್ದೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆಜಿಎಫ್ ಇಷ್ಟವಾಗಿಲ್ಲ ಎಂದ ಪ್ರೇಕ್ಷಕರೂ ಇದ್ದಾರೆ!