Publish Date: Mon, 06 Aug 2018 (06:41 IST)
Updated Date: Mon, 06 Aug 2018 (06:44 IST)
ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್ ಅವರು ತನ್ನ ಮೀರ್ ಪೌಂಡೇಷನ್ ಮೂಲಕ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ಥರಿಗೆ ಸಹಾಯ ಮಾಡುತ್ತಿದ್ದು, ಇದೀಗ ತಮ್ಮ ಅಭಿಮಾನಿಗಳಲ್ಲೂ, ಆಸಿಡ್ ದಾಳಿಗೊಳಗಾದವರಿಗೆ ಸಹಾಯ ಮಾಡಿ ಅವರ ಬೆಂಬಲಕ್ಕೆ ನಿಲ್ಲಿ ಎಂದು ಮನವಿ ಮಾಡಿದ್ದಾರೆ.
ಶಾರೂಖ್ ಖಾನ್ ಅವರ ಮೀರ್ ಫೌಂಡೇಶನ್ ಆಸಿಡ್ ದಾಳಿಗೆ ಒಳಗಾದ ಸಂತ್ರಸ್ಥರ ಚಿಕಿತ್ಸೆ, ವೈದ್ಯಕೀಯ ಸಹಾಯ, ಕಾನೂನು ಸಲಹೆ, ಪುನರ್ವಸತಿ ಮತ್ತು ತರಬೇತಿಯನ್ನು ನೀಡುವ ಮೂಲಕ ಅವರಿಗೆ ನೆರವು ನೀಡುತ್ತದೆ. ಅಷ್ಟೇ ಅಲ್ಲದೆ ಸಮಾಜದಲ್ಲಿನ ಈ ವಿಕೃತಿಯ ಕುರಿತಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಕೂಡ ಕೈಗೊಂಡಿದೆ.
ಇದೀಗ ನಟ ಶಾರುಖ್ ಖಾನ್ ಅವರು ಇನ್ಸ್ಟಾಗ್ರಾಂ ನಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿ ,ಬ್ಯೂಟಿ ಇಸ್ ನಾಟ್ ಸ್ಕೀನ್ ಡೀಪ್ ಎನ್ನಲಾಗುತ್ತದೆ. ಇದನ್ನು ಹೇಳುವುದು ಸುಲಭ., ಆದರೆ ಮಾಡುವುದು ಕಷ್ಟ. ಯಾವುದು ಚೆನ್ನಾಗಿಲ್ಲ ಅನಿಸುತ್ತದೆಯೋ ನಾವು ಅದರಿಂದ ದೂರವಿರಲು ಬಯಸುತ್ತೇವೆ. ನಮ್ಮೊಳಗೆ ನಾವು ಭೇದಭಾವ ಮಾಡುತ್ತೇವೆ ಎಂದಿರುವ ಶಾರೂಖ್ ಖಾನ್, ಆಸಿಡ್ ದಾಳಿಗೆ ಒಳಗಾಗಿ ಸಂಕಷ್ಟಪಡುತ್ತಿರುವ ಮಹಿಳೆಯರ ಬೆಂಬಲಕ್ಕೆ ನಿಲ್ಲುವಂತೆ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ