Publish Date: Wed, 02 Nov 2022 (19:35 IST)
Updated Date: Wed, 02 Nov 2022 (19:38 IST)
ಇಂದು ಬಾಲಿವುಡ್ ನಟ ಶಾರುಖ್ ಖಾನ್ಗೆ ಹುಟ್ಟುಹಬ್ಬದ ಸಂಭ್ರಮ. ಆ ಪ್ರಯುಕ್ತ ಅಭಿಮಾನಿಗಳು, ಸೆಲೆಬ್ರಿಟಿಗಳು ಹಾಗೂ ಆಪ್ತರು ಶುಭಾಶಯ ತಿಳಿಸುತ್ತಿದ್ದಾರೆ. ತಡರಾತ್ರಿ ಶಾರುಖ್ ಮನೆಗೆ ಬಂದ ಅಭಿಮಾನಿಗಳು ಕಿಂಗ್ ಖಾನ್ಗೆ ಶುಭಾಶಯವನ್ನು ತಿಳಿಸಿದ್ದಾರೆ. ಸಾವಿರಾರು ಅಭಿಮಾನಿಗಳು ಶಾರುಖ್ ಮನೆ ಬಳಿ ಜಮಾಯಿಸಿದ್ರು. ಶಾರುಖ್ ಮನೆಯಿಂದ ಹೊರ ಬಂದು ಅಭಿಮಾನಿಗಳೊಂದಿಗಳ ಶುಭಾಶಯ ಸ್ವೀಕರಿಸಿದ್ರು.
ಇವರು ಎಷ್ಟೇ ಸಿನಿಮಾ ಸೋತರೂ ಶಾರುಖ್ ಖಾನ್ ಅವರಿಗೆ ಇರುವ ಡಿಮ್ಯಾಂಡ್ ಕಡಿಮೆ ಆಗಿಲ್ಲ. ಅವರನ್ನು ಪ್ರೀತಿಸುವ ಜನರ ಸಂಖ್ಯೆಯೂ ತಗ್ಗಿಲ್ಲ. ಕಿಂಗ್ ಖಾನ್ ಜೊತೆ ಚಿತ್ರ ಮಾಡಲು ಹಲವು ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಈಗಲೂ ಸಾಲುಗಟ್ಟಿ ನಿಂತಿವೆ. ಅದೇ ಭರವಸೆಯೊಂದಿಗೆ ಶಾರುಖ್ ಅವರು ಮೈಕೊಡವಿ ನಿಲ್ಲಲು ಸಜ್ಜಾಗಿದ್ದಾರೆ. ಅನೇಕ ಪ್ರಾಜೆಕ್ಟ್ಗಳಲ್ಲಿ ಶಾರುಖ್ ಬ್ಯುಸಿ ಆಗಿದ್ದಾರೆ. ಆ ಚಿತ್ರತಂಡಗಳಿಂದ ಇಂದು ವಿಶೇಷ ಟೀಸರ್ ಹಾಗೂ ಪೋಸ್ಟರ್ಗಳು ಬಿಡುಗಡೆ ಆಗುವ ನಿರೀಕ್ಷೆ ಇದೆ.