ಒಂದೇ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ

Sampriya
ಸೋಮವಾರ, 31 ಮಾರ್ಚ್ 2025 (14:34 IST)
Photo Courtesy X
ಹೈದರಾಬಾದ್: ಟಾಲಿವುಡ್‌ ಅಂಗಳದಲ್ಲಿ ಸದಾ ಸುದ್ದಿಯಲ್ಲಿರುವ ಜೋಡಿಯೆಂದರೆ ನ್ಯಾಶನಲ್ ಕ್ರಶ್‌ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ.

ಹಲವು ವರ್ಷಗಳಿಂದ ಈ ಜೋಡಿ ಡೇಟಿಂಗ್‌ನಲ್ಲಿದೆ ಎಂಬುದು ಸುದ್ದಿಯಲ್ಲಿದೆ. ಆದರೆ ಎಲ್ಲೂ ಇವರು ಈ ವಿಷಯವನ್ನು ಖಚಿತಪಡಿಸಿಲ್ಲ. ಆದರೆ ಆಗಾಗ ಒಟ್ಟಿಗೆ ಟ್ರಿಪ್‌ಗೆ, ಡಿನ್ನರ್‌ಗೆ ಹೋಗುತ್ತಿರುವುದು ಕ್ಯಾಮಾರದಲ್ಲಿ ಸೆರೆಯಾಗಿದೆ.

ಇದೀಗ ಈ ಜೋಡಿ ಮತ್ತೇ ಒಟ್ಟಿಗೆ ಕಾಣಿಸಿಕೊಂಡು ಡೇಟಿಂಗ್‌ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ಮಾರ್ಚ್ 30 ರಂದು ರಶ್ಮಿಕಾ ಮತ್ತು ವಿಜಯ್ ಮುಂಬೈನ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡರು. ಒಳಗೆ ಹೋಗುವ ಮೊದಲು ರಶ್ಮಿಕಾ ಛಾಯಾಗ್ರಾಹಕರನ್ನು ನೋಡಿ ಮುಗುಳ್ನಕ್ಕರು. ಕೆಲವು ಕ್ಷಣಗಳ ನಂತರ, ವಿಜಯ್ ಕ್ಯಾಪ್ ಮತ್ತು ಮುಖವಾಡದಿಂದ ಮುಖವನ್ನು ಮರೆಮಾಡಿಕೊಂಡು ಹಿಂಬಾಗಿಲಿನಿಂದ ಪ್ರವೇಶಿಸಿದರು. ಅವರ ಶಾಂತ ಊಟವು ಆನ್‌ಲೈನ್‌ನಲ್ಲಿ ವೈರಲ್ ಆಯಿತು ಮತ್ತು ಮತ್ತೊಮ್ಮೆ ಡೇಟಿಂಗ್ ಮಾತುಕತೆಗಳನ್ನು ಹುಟ್ಟುಹಾಕಿತು.

ಗೀತ ಗೋವಿಂದಂ ಸಿನಿಮಾದ ಮೂಲಕ ಪರಿಷಯವಾದ ಈ ಜೋಡಿ, ಆಮೇಲೆ ಸ್ನೇಹಿತಾರದರು. ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ಕೆಲಸ ಮಾಡುವಾಗ ರಶ್ಮಿಕಾ ಮತ್ತು ವಿಜಯ್ ಆತ್ಮೀಯರಾದರು. ಅವರ ತೆರೆಯ ಮೇಲಿನ ಕೆಮಿಸ್ಟ್ರಿ ಅಭಿಮಾನಿಗಳಿಗೆ ಇಷ್ಟವಾಯಿತು.

ಕೆಲ ವರ್ಷಗಳಿಂದಲೂ ಇವರಿಬ್ಬರೂ ಡೇಟಿಂಗ್‌ನಲ್ಲಿರುವ ಬಗ್ಗೆ ವದಂತಿ ಹರಿದಾಡುತ್ತಲೇ ಇದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ದರ್ಶನ್ ಆಂಡ್ ಗ್ಯಾಂಗ್ ಗೆ ತಾತ್ಕಾಲಿಕ ರಿಲೀಫ್: ದೋಷಾರೋಪಪಟ್ಟಿ ಮುಂದೂಡಿಕೆ

ಮಗ ವಿನೀಶ್ ಹುಟ್ಟುಹಬ್ಬದಂದೇ ದರ್ಶನ್ ಗೆ ಅಗ್ನಿಪರೀಕ್ಷೆ: ದಾಸನಿಗೆ ಎದೆಯಲ್ಲಿ ಢವ ಢವ

ಮುಂದಿನ ಸುದ್ದಿ
Show comments