ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

Sampriya
ಭಾನುವಾರ, 30 ನವೆಂಬರ್ 2025 (11:46 IST)
Photo Credit X
ಬೆಂಗಳೂರು: ಐಎಫ್‌ಎಫ್‌ಐ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕಾಂತಾರ ಅಧ್ಯಾಯ 1 ದೃಶ್ಯವನ್ನು ಅನುಕರಿಸಲು ಹೋಗಿ ಹಾಗೂ ದೈವವನ್ನು ದೆವ್ವ ಎಂದು ಹೇಳುವ ಮೂಲಕ ಇದೀಗ  ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 

ಸಮಾರಂಭದಲ್ಲಿ ಭಾಗಿಯಾಗಿದ್ದ ನಟ ರಿಷಬ್‌ ಶೆಟ್ಟಿಯನ್ನು ಕಾಂತಾರ ಅಧ್ಯಾಯ 1 ಸಿನಿಮಾ ಅಭಿನಯಕ್ಕಾಗಿ ರಣಬೀರ್ ಕೊಂಡಾಡಿದ್ದಾರೆ. ಈ ವೇಳೆ ಸಿನಿಮಾವನ್ನು ಹೊಗಳುವಾಗ ದೈವವನ್ನು ದೆವ್ವ ಎಂದು ರಣಬೀರ್ ಹೇಳಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ನಗುತ್ತಲೇ ಅದನ್ನು ಸ್ವೀಕರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು,  ರಿಷಬ್ ನಡೆಗೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. 

ವೈರಲ್ ವಿಡಿಯೋದಲ್ಲಿ ರಣಬೀರ್ ಹೇಳಿಕೆ ದೈವರಾಧನೆ ಬಗ್ಗೆ ಅಗೌರವನ್ನು  ತೋರಿದ್ದಾರೆ ಎನ್ನಲಾಗಿದೆ. ರಣಬೀರ್ ಮಾತಿಗೆ ರಿಷಭ್ ಶೆಟ್ಟಿ ನಕ್ಕಿರುವುದಕ್ಕೆ, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. 

ಇವನೊಬ್ಬ ದೈವ ಭಕ್ತ, ದೈವವನ್ನು ನಂಬುವವನೇ. ಈ ರೀತಿ ದೈವವನ್ನು ಅಪಮಾನ ಮಾಡುವಾಗ ಕಣ್ಣು ಕಾಣದ ಹಾಗೆ ಮೂಕನಂತೆ ಕುಳಿತಿದ್ದಾನೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ‌

ಮತ್ತೊಬ್ಬರು ರಣಬೀರ್ ಸಿಂಗ್‌ಗೆ ದೈವದ ಬಗ್ಗೆ ತಿಳಿದಿಲ್ಲ. ತಪ್ಪು ಮಾತನಾಡಿದಾಗ ಅವನನ್ನು ತಿದ್ದಬೇಕಿತ್ತು, ಅದನ್ನು ಬಿಟ್ಟು ರಿಷಭ್ ನಕ್ಕಿರುವುದು ಎಷ್ಟು ಸರಿ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಶುಕ್ರವಾರ (ನವೆಂಬರ್ 28), ಚಲನಚಿತ್ರ ನಿರ್ಮಾಪಕ ಮತ್ತು ನಟ ರಿಷಬ್ ಶೆಟ್ಟಿ ಮತ್ತು ರಣವೀರ್ ಸಿಂಗ್ ಗೋವಾದಲ್ಲಿ ನಡೆದ IFFI 2025 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ, ರಣವೀರ್ ಕಾಂತಾರ ಅಧ್ಯಾಯ 1 ರಲ್ಲಿ ರಿಷಬ್ ಅಭಿನಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆದಾಗ್ಯೂ, ಈ ಕ್ಷಣದ ವೀಡಿಯೊವು ಎಲ್ಲಾ ತಪ್ಪು ಕಾರಣಗಳಿಗಾಗಿ ವೈರಲ್ ಆಗಿದೆ, ಹಲವಾರು ಇಂಟರ್ನೆಟ್ ಬಳಕೆದಾರರು ರಣವೀರ್ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯವನ್ನು ಅನುಕರಿಸಲು ಮತ್ತು ದೈವವನ್ನು 'ಹೆಣ್ಣು ದೆವ್ವ ಎಂದು ಉಲ್ಲೇಖಿಸಿದ್ದಾರೆ ಎಂದು ಟೀಕಿಸಿದ್ದಾರೆ.

ವೀಡಿಯೊದಲ್ಲಿ, "ನಾನು ಕಾಂತಾರ ಅಧ್ಯಾಯ 1 ಅನ್ನು ಥಿಯೇಟರ್‌ಗಳಲ್ಲಿ ನೋಡಿದ್ದೇನೆ, ಮತ್ತು ರಿಷಬ್, ಇದು ಅತ್ಯುತ್ತಮ ಪ್ರದರ್ಶನವಾಗಿದೆ, ವಿಶೇಷವಾಗಿ ಹೆಣ್ಣು ದೆವ್ವ (ಚಾಮುಂಡಿ ದೈವ) ನಿಮ್ಮ ದೇಹಕ್ಕೆ ಪ್ರವೇಶಿಸಿದಾಗ - ಆ ಶಾಟ್ ಅದ್ಭುತವಾಗಿದೆ" ಎಂದು ರಣವೀರ್ ಹೇಳುವುದನ್ನು ಕೇಳಲಾಗುತ್ತದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

ಕಳೆದ ಸೀಸನ್‌ನಲ್ಲಿ ಧೂಳೇಬ್ಬಿಸಿದ ಈ ಜೋಡಿ , ಇನ್ಮುಂದೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು

ಖ್ಯಾತ ಹಾಸ್ಯ ಕಲಾವಿದ ಉಮೇಶ್‌ ಇನ್ನಿಲ್ಲ, ಕಲಾ ಬದುಕಿಗೆ ಎಂಟ್ರಿ ಕೊಟ್ಟಿದೆ ರೋಚಕ

ನಿಮಗೂ ರೆಸ್ಟೋರೆಂಟ್‌ನಲ್ಲಿ ಹೀಗೇ ನಡೆಸಿಕೊಂಡರೆ ಒಕೆ ನಾ, ಗಿಲ್ಲಿಗೆ ಕಿಚ್ಚ ಸುದೀಪ್ ಪ್ರಶ್ನೆ

ಧರ್ಮೇಂದ್ರಾ ಶ್ರದ್ಧಾಂಜಲಿ ಸಭೆಗೆ ಹೇಮಾಗೆ ನೋ ಎಂಟ್ರಿ, ಎರಡನೇ ಪತ್ನಿ ಮಕ್ಕಳು ಮಾಡಿದ್ದೇನೂ ಗೊತ್ತಾ

ಮುಂದಿನ ಸುದ್ದಿ
Show comments