Publish Date: Sat, 03 Sep 2022 (17:54 IST)
Updated Date: Sat, 03 Sep 2022 (17:56 IST)
ಮುಂಬೈ: ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದ್ ಗೆ ಬಂದಿದ್ದ ನಟ ರಣಬಿರ್ ಕಪೂರ್ ತೆಲುಗಿನಲ್ಲಿ ಮಾತನಾಡಿ ಎಲ್ಲರನ್ನೂ ಅಚ್ಚರಿಗೊಳಪಡಿಸಿದ್ದಾರೆ.
ಪತ್ನಿ, ಬ್ರಹ್ಮಾಸ್ತ್ರ ನಾಯಕಿ ಅಲಿಯಾ ಭಟ್, ನಿರ್ಮಾಪಕ ಕರಣ್ ಜೋಹರ್ ಜೊತೆಗೆ ವೇದಿಕೆಯಲ್ಲಿದ್ದ ರಣಬೀರ್ ಸಿನಿಮಾ ಬಗ್ಗೆ ತೆಲುಗಿನಲ್ಲಿ ಮಾತನಾಡಿದ್ದಾರೆ.
ರಣಬೀರ್ ತೆಲುಗಿನಲ್ಲಿ ಮಾತನಾಡುತ್ತಿದ್ದರೆ ಹಿಂದೆ ವೇದಿಕೆಯಲ್ಲಿ ಕುಳಿತಿದ್ದ ಅಲಿಯಾ ತಪ್ಪು ಮಾತನಾಡಿ ಅಪಾರ್ಥವಾಗದಿದ್ದರೆ ಸಾಕು ಎಂಬ ರೀತಿಯಲ್ಲಿ ಕೈ ಮುಗಿದು ಕುಳಿತಿದ್ದು ನೆಟ್ಟಿಗರ ಗಮನ ಸೆಳೆದಿದೆ.