Select Your Language

Notifications

webdunia
webdunia
webdunia
webdunia

ರಾಮಾಯಣ ಟೀಸರ್ ರಿಲೀಸ್: ರಾವಣನಾಗಿ ಯಶ್ ಲುಕ್ ಇಲ್ಲಿದೆ ವಿಡಿಯೋ ನೋಡಿ

Ramayana teaser

Krishnaveni K

ಮುಂಬೈ , ಗುರುವಾರ, 3 ಜುಲೈ 2025 (13:37 IST)
Photo Credit: X

ಮುಂಬೈ: ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್ ನ ರಾಮಾಯಣ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದ್ದು ಭಾರೀ ವೈರಲ್ ಆಗಿದೆ. ಯಶ್ ರಾವಣನಾಗಿ ಮಿಂಚಿರುವ ಟೀಸರ್ ಇಲ್ಲಿದೆ ನೋಡಿ.

ಇತ್ತೀಚೆಗಿನ ದಿನಗಳಲ್ಲಿ ಬಂದಿರುವ ರಾಮಾಯಣ ಕುರಿತಾದ ಸಿನಿಮಾಗಳೆಲ್ಲವೂ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಇದರಿಂದ ಪ್ರೇಕ್ಷಕರೂ ನಿರಾಶರಾಗಿದ್ದರು. ಆದರೆ ರಣಬೀರ್ ಕಪೂರ್ ರಾಮ ಮತ್ತು ಯಶ್ ರಾವಣನಾಗಿ ಅಭಿನಯಿಸುತ್ತಿರುವ ನಿತೀಶ್ ತಿವಾರಿಯವರ ರಾಮಾಯಣ ಸಿನಿಮಾ ಮೇಲೆ ಜನರಿಗೆ ಅಪಾರ ನಿರೀಕ್ಷೆಯಿದೆ.

ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಸೀತೆಯ ಪಾತ್ರ ಮಾಡುತ್ತಿದ್ದಾರೆ. ಇಂದು ಹೊರಬಿಟ್ಟಿರುವ ಟೀಸರ್ ನಲ್ಲಿ ರಣಬೀರ್ ಕಪೂರ್ ಮತ್ತು ಯಶ್ ಲುಕ್ ಅನಾವರಣಗೊಂಡಿದೆ. ಉಳಿದ ಪಾತ್ರಗಳ ಲುಕ್ ಇನ್ನೂ ಬಿಟ್ಟುಕೊಟ್ಟಿಲ್ಲ.

ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದ್ದು, ಮೊದಲ ಭಾಗ 2026 ರಲ್ಲಿ ಮತ್ತು ಎರಡನೇ ಭಾಗ 2027 ರ ದೀಪಾವಳಿ ವೇಳೆಗೆ ಹೊರತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ನಿತೀಶ್ ತಿವಾರಿ ನಿರ್ದೇಶಿಸುತ್ತಿರುವ ಸಿನಿಮಾಗೆ ಎಆರ್ ರೆಹಮಾನ್ ಸಂಗೀತ ಸಂಯೋಸುತ್ತಿದ್ದಾರೆ. ಯಶ್ ಕೂಡಾ ಸಿನಿಮಾ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪಾರ್ವತಮ್ಮನವರಿಗೂ ಇಷ್ಟು ಧಿಮಾಕು ಇರ್ಲಿಲ್ಲ: ಯಶ್ ತಾಯಿ ಪುಷ್ಪ ಟ್ರೋಲ್ ಆಗಿದ್ದೇಕೆ