Select Your Language

Notifications

webdunia
webdunia
webdunia
webdunia

ಮುಸ್ಲಿಂ ಆಗಿರುವ ಕಾರಣ ನನಗೆ ಮತ್ತೇ ಮದುವೆಯಾಗುವ ಹಕ್ಕಿದೆ: ರಾಖಿ ಸಾವಂತ್‌ ಪತಿ ಆದಿಲ್ ಖಾನ್

Adil Khan

Sampriya

ಮುಂಬೈ , ಗುರುವಾರ, 14 ಮಾರ್ಚ್ 2024 (12:55 IST)
Photo Courtesy: Twitter
ಮುಂಬೈ: ವಿವಾದಾತ್ಮಕ ನಟಿ ರಾಖಿ ಸಾವಂತ್‌ ಜತೆಗಿನ ನನ್ನ ವಿವಾಹವು 'ಶೂನ್ಯ ಹಾಗೂ ಅನೂರ್ಜಿತ' ಎಂದು  ನಟ ಆದಿಲ್ ಖಾನ್ ಹೇಳಿದ್ದಾರೆ. 
 
ಖಾಸಗಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ಆದಿಲ್ ಖಾನ್ ಅವರು, ನಾನು ಸೋಮಿ ಖಾನ್ ಎಂಬಾಕೆಯನ್ನು ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅದಲ್ಲದೆ ನನ್ನ ಹಾಗೂ ರಾಖಿ ಮದುವೆ ಶೂನ್ಯ ಹಾಗೂ ಅನೂರ್ಜಿತವಾಗಿರುವುದಾಗಿ ಹೇಳಿಕೆ ನೀಡಿದ್ದಾರೆ. 
 
ರಾಖಿ ಈಗಾಗಲೇ ಬೇರೆಯವರನ್ನು ಮದುವೆಯಾಗಿದ್ದಾಳೆ. ಹಲವು ಮಂದಿಗೆ ನಾನು ಮತ್ತೇ ಹೇಗೇ ಮದುವೆಯಾದೆ ಎಂದು ಪ್ರಶ್ನೆಯಿದೆ. ಮುಸ್ಲಿಂ ಆಗಿರುವ ಕಾರಣ ನನಗೆ ಮತ್ತೇ ಮದುವೆಯಾಗುವ ಹಕ್ಕಿದೆ. ನಾನು ಹಾಗೂ ಸೋಮಿ ಕುಟುಂಬದವರ ಸಮ್ಮುಖದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ ಎಂದರು. 
 
ಇನ್ನೂ ರಾಖಿ ಸಾವಂತ್ ಮೇಲೆ ಆರೋಪದ ಸುರಿಮಳೆ ಗೈದ ಆದಿಲ್ ಖಾನ್, ಆಕೆ  ಯಾವಾಗಲೂ ನಕಾರಾತ್ಮಕತೆಯನ್ನು ಹರಡುತ್ತಾಳೆ ಮತ್ತು ಅವಳು ಯಾರಿಗೂ ಸಂತೋಷವನ್ನು ನೀಡಲು ಸಾಧ್ಯವಿಲ್ಲ. ನಾನು ಅವಳಂತೆ ಅಲ್ಲ. ನಾನು ಸಂತೋಷವನ್ನು ಹರಡಲು ಇಷ್ಟಪಡುತ್ತೇನೆ ಮತ್ತು ಸೋಮಿ ನನ್ನ ಜೀವನದಲ್ಲಿ ಸಂತೋಷವನ್ನು ತಂದಿದ್ದಾಳೆ ಮತ್ತು ನಾನು ಅವಳೊಂದಿಗೆ ನನ್ನ ಸಂತೋಷ ಮತ್ತು ಶಾಂತಿಯುತ ಜೀವನವನ್ನು ಆನಂದಿಸುತ್ತಿದ್ದೇನೆ ಎಂದರು. 
ಆದಿಲ್ ಮತ್ತು ಸೋಮಿ ಮಾರ್ಚ್ 3 ರಂದು ಆತ್ಮೀಯ ನಿಕಾಹ್‌ನಲ್ಲಿ ವಿವಾಹವಾದರು. ಮದುವೆಯ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. "ಬಿಸ್ಮಿಲ್ಲಾಹಿರ್ ರಹಮಾನಿರ್ ರಹೀಮ್ ಅಲ್ಲಾಹನ ಕೃಪೆಯಿಂದ ನಾವು ನಮ್ಮ ನಿಕ್ಕಾವನ್ನು ಸರಳ ಮತ್ತು ಸುಂದರ ಸಮಾರಂಭದಲ್ಲಿ ಆಚರಿಸಿದ್ದೇವೆ ಎಂದು ಘೋಷಿಸಲು ನಾವು ತುಂಬಾ ಸಂತೋಷಪಡುತ್ತೇವೆ" ಎಂದು ಬರೆದುಕೊಂಡಿದ್ದರು. 
 
ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ಕಳೆದ ವರ್ಷ ಜುಲೈನಲ್ಲಿ ವಿವಾಹವಾದರು. ರಾಖಿ ನೀಡಿದ ದೂರಿನ ಮೇರೆಗೆ ಆದಿಲ್ ಖಾನ್ ಅವರನ್ನು ಫೆಬ್ರವರಿ 2023ರಲ್ಲಿ ಬಂಧಿಸಲಾಗಿತ್ತು. ಈ ಸುದ್ದಿ ಭಾರೀ ಸದ್ದು ಮಾಡಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ಕಾರು ಆಕ್ಸಿಡೆಂಟ್ ಮಾಡಿಕೊಂಡ ತುಕಾಲಿ ಸಂತೋಷ್