Select Your Language

Notifications

webdunia
webdunia
webdunia
webdunia

ಲೈಂಗಿಕ ಕಿರುಕುಳ ನೀಡಿದವನಿಗೆ ತಕ್ಕಶಾಸ್ತಿ ಮಾಡಿದ ನಟಿ ರಾಧಿಕಾ ಆಪ್ಟೆ

ಲೈಂಗಿಕ ಕಿರುಕುಳ ನೀಡಿದವನಿಗೆ ತಕ್ಕಶಾಸ್ತಿ ಮಾಡಿದ ನಟಿ ರಾಧಿಕಾ ಆಪ್ಟೆ
ಮುಂಬೈ , ಶನಿವಾರ, 17 ಮಾರ್ಚ್ 2018 (06:26 IST)
ಮುಂಬೈ : ಸಿನಿಮಾ ನಟಿಯರ ಮೇಲಾದ ಲೈಂಗಿಕ  ಕಿರುಕುಳಗಳ ಬಗ್ಗೆ ನಾವು ಹಲವು ಬಾರಿ ಅವರ ಬಾಯಿಂದ ಕೇಳಿದ್ದೇವೆ. ಅದೇರೀತಿ ಈಗ ಪ್ಯಾಡ್ ಮ್ಯಾನ್ ಚಿತ್ರದಲ್ಲಿ ನಟಿಸಿದ ರಾಧಿಕಾ ಆಪ್ಟೆ ಕಾರ್ಯಕ್ರಮವೊಂದರಲ್ಲಿ ತಮ್ಮ ಮೇಲಾದ ಲೈಂಗಿಕ ಕಿರುಕುಳದ ಬಗ್ಗೆ ಹೇಳಿಕೊಂಡಿದ್ದಾರೆ.

ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಧಿಕಾ ಆಪ್ಟೆ ಅವರು ಹಿಂದೊಮ್ಮೆ ಲೈಂಗಿಕ ಕಿರುಕುಳ ನೀಡಿದ ದಕ್ಷಿಣ ಭಾರತ ಸಿನಿಮಾದ ಖ್ಯಾತ ನಟರೊಬ್ಬರ ಕೆನ್ನೆ ಗೆ ಬಾರಿಸಿರುವುದಾಗಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,’ ಅದು ನನ್ನ ಮೊದಲ ದಿನದ ಚಿತ್ರೀಕರಣವಾಗಿತ್ತು. ಶೂಟಿಂಗ್ ಗೆ ಹೋದಾಗ ಮೊದಲ ದಿನವೇ ನನ್ನ ಪಕ್ಕ ಬಂದ ಕುಳಿತ ಆ ನಟ ತನ್ನ ಕಾಲಿಂದ ನನ್ನ ಕಾಲಿಗೆ ಉಜ್ಜಿ ಅಸಭ್ಯವಾಗಿ ನಡೆದುಕೊಂಡನು. ಕೂಡಲೇ ನಾನು ಆತನ ಕೆನ್ನೆಗೆ ಬಾರಿಸಿದೆ’ ಎಂದು ಹೇಳಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ಭೇಟಿಯಿಂದ ತಿಪಟೂರಿನ ಈ ಅಂಗವಿಕಲ ಮಕ್ಕಳ ಬಾಳಲ್ಲಿ ಹೊಸ ಬೆಳಕು ಮೂಡಲಿದೆಯಾ...?