ಮುಂಬೈ : ದೇಶದ ಮಹಾನ್ ವ್ಯಕ್ತಿ, ಪ್ರಸಿದ್ಧ ಸಿನಿಮಾ ತಾರೆಯರು, ಸ್ಪೋರ್ಟ್ ಮ್ಯಾನ್ ಹೀಗೆ ಹಲವರ ಜೀವನ ಕಥೆಗಳು ಇತ್ತಿಚೆಗೆ ಸಿನಿಮಾ ರೂಪದಲ್ಲಿ ಮೂಡಿಬರುತ್ತಿದ್ದು, ಇದೀಗ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆಯನ್ನೊಳಗೊಂಡ ಸಿನಿಮಾ ಬಾಲಿವುಡ್ ನಲ್ಲಿ ಮೂಡಿಬರಲಿದೆಯಂತೆ.
ರಾಜಕೀಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟ ಹಾಗೂ ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಅವರು ಈ ಸಿನಿಮಾದಲ್ಲಿ ಮೋದಿ ಅವರ ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಈ ಬಗ್ಗೆ ಅವರು ಲಂಡನ್ ನಲ್ಲಿ ನಡೆದ ‘ಪೊಲಿಟಿಕಲ್ ಅಂಡ್ ಪಬ್ಲಿಕ್ ಲೈಫ್ ಅವಾರ್ಡ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ತಿಳಿಸಿದ್ದಾರಂತೆ. ಪ್ರಧಾನಿ ಮೋದಿ ಅವರು ಡೈನಾಮಿಕ್ ಆ್ಯಕ್ಷನ್ ಹೀರೊ ಎಂದು ಹೊಗಳಿ ಅವರ ಪಾತ್ರಕ್ಕೆ ತಾವು ನ್ಯಾಯ ಕೊಡಲು ಪ್ರಯತ್ನಿಸುವುದಾಗಿ ಹೇಳಿದ್ದಾರಂತೆ.
ಬಾಲಿವುಡ್ ನ ಪ್ರಸಿದ್ಧ ನಿರ್ಮಾಪಕ ಶೀತಲ್ ತಲ್ವಾರ್ ಅವರ ನಿರ್ಮಾಣದಲ್ಲಿ ಮೂಡಿಬರಲಿರುವ ಈ ಚಿತ್ರಕ್ಕೆ ಅವರ ಪತ್ನಿ ಭಾವನಾ ತಲ್ವಾರ್ ಅವರು ನಿರ್ದೇಶನ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ