ಅನಾಥಾಶ್ರಮದ ಮಕ್ಕಳಿಗಾಗಿ ನಿಕ್ ಜೊನಾಸ್ ಹಾಡುತ್ತಿರುವ ವೀಡಿಯೋ ಹಂಚಿಕೊಂಡ ಪ್ರಿಯಾಂಕಾ..

ಮಂಗಳವಾರ, 21 ಆಗಸ್ಟ್ 2018 (17:09 IST)
ಕಳೆದ ವಾರವಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿರುವ ಪಿಗ್ಗಿ ಮತ್ತು ನಿಕ್ ವಾರ ಪೂರ್ತಿ ಬ್ಯುಸಿಯಾಗಿದ್ದರು. ನಿಶ್ಚಿತಾರ್ಥ, ನಿಶ್ಚಿತಾರ್ಥದ ಪಾರ್ಟಿ ಎಂದು ತುಂಬಾ ಬ್ಯುಸಿಯಾಗಿರುವ ಪ್ರಿಯಾಂಕಾ ಅನಾಥಾಶ್ರಮದ ಚಿಕ್ಕ ಹುಡುಗಿಯೊಬ್ಬಳ ಜೊತೆ ಡಾನ್ಸ್ ಮಾಡುತ್ತಿರುವ ವೀಡಿಯೊ ವೈರಲ್ ಆಗಿತ್ತು.

ಪಿಗ್ಗಿ ಅಭಿಮಾನಿಗಳು ತುಂಬಾ ಖುಷಿಯೂ ಆಗಿದ್ದರು. ಪ್ರಿಯಾಂಕಾ ಹಾಗೂ ನಿಕ್ ತಮ್ಮ ನಿಶ್ಚಿತಾರ್ಥದ ನಂತರ ಅನಾಥಾಶ್ರಮವೊಂದಕ್ಕೆ ಭೇಟಿ ನೀಡಿ ತಮ್ಮ ಸಮಯವನ್ನು ಅಲ್ಲಿನ ಮಕ್ಕಳೊಂದಿಗೆ ಕಳೆದಿದ್ದಾರೆ. ಪ್ರಿಯಾಂಕಾ ಚಿಕ್ಕ ಮಕ್ಕಳೊಡನೆ ಡಾನ್ಸ್ ಮಾಡುತ್ತಿರುವ ವೀಡಿಯೊವನ್ನು ಈ ಮೊದಲು ನಿಕ್ ಹಂಚಿಕೊಂಡಿದ್ದರು.
 
ಆದರೆ ಈಗ ಪ್ರಿಯಾಂಕಾ ತಮ್ಮ ಭಾವಿ ಪತಿ ನಿಕ್ ಜೊನಾಸ್ ಅವರು ಅನಾಥಾಶ್ರಮದಲ್ಲಿ ಮಕ್ಕಳಿಗಾಗಿ ಹಾಡಿರುವ 'ಲವ್‌ಬಗ್' ಹಾಡಿನ ವೀಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಜನರ ಮನಸೆಳೆದಿರುವ ವಿಷಯವೇನೆಂದರೆ, ಪ್ರಿಯಾಂಕಾ ಛೋಪ್ರಾ ನಿಕ್ ಪಕ್ಕದಲ್ಲೇ ಕುಳಿತು ಹಾಡು ಮುಗಿಯುವವರೆಗೂ ಅವರನ್ನೇ ನೋಡುತ್ತಿರುವುದು.

ಇದು ನಿಕ್ ಕುರಿತು ಪ್ರಿಯಾಂಕಾಗಿರುವ ಪ್ರೀತಿಯನ್ನು ತೋರಿಸುತ್ತಿತ್ತು. ಇವರೊಂದಿಗೆ ನಿಕ್ ಪಾಲಕರಾದ ಪೌಲ್ ಕೆವಿನ್ ಜೊನಾಸ್ ಮತ್ತು ಡೆನಿಸ್ ಮಿಲ್ಲರ್ ಜೊನಾಸ್ ಸಹ ಇದ್ದು ಅವರೂ ಸಹ ನಿಕ್ ಹಾಡಿಗೆ ಮಕ್ಕಳೊಂದಿಗೆ ಚಿಯರ್ ಮಾಡುತ್ತಿರುವುದು ವೀಡಿಯೊದಲ್ಲಿ ಕಂಡುಬರುತ್ತದೆ.
 
ನಿಕ್ ಹಾಗೂ ಅವರ ಪಾಲಕರು ಭಾನುವಾರವೇ ಭಾರತದಿಂದ ಯುಎಸ್‌ಗೆ ಹೊರಟಿದ್ದರು. ಹಲವು ಮೂಲಗಳ ಪ್ರಕಾರ ಈ ಜೋಡಿ ಇದೇ ವರ್ಷಾಂತ್ಯದಲ್ಲಿ ಮದುವೆಯಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೇರಳ ಸಂತ್ರಸ್ತರ ನೆರವಿಗೆ 14 ಕೋಟಿ ರೂ ಹಣ ಕೊಟ್ಟ ಕಾಲಿವುಡ್ ನ ನಟ ಯಾರು ಗೊತ್ತಾ?