Select Your Language

Notifications

webdunia
webdunia
webdunia
webdunia

ಅಭಿಮಾನಿಯ ಜತೆ ಮಂಡಿಯೂರಿ ಕುಳಿತು ಫೋಟೋ ತೆಗೆಸಿಕೊಂಡ ಪ್ರಭಾಸ್!

ಅಭಿಮಾನಿಯ ಜತೆ ಮಂಡಿಯೂರಿ ಕುಳಿತು ಫೋಟೋ ತೆಗೆಸಿಕೊಂಡ ಪ್ರಭಾಸ್!
ಹೈದರಾಬಾದ್ , ಸೋಮವಾರ, 2 ಏಪ್ರಿಲ್ 2018 (06:36 IST)
ಹೈದರಾಬಾದ್ : ಟಾಲಿವುಡ್ ನ ಸ್ಟಾರ್ ನಟ ಎಂದು ಹೆಸರು ಗಳಿಸಿರುವ ಪ್ರಭಾಸ್ ಅವರು ಅಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದರೂ ಕೂಡ ಅವರಿಗೆ ಒಂದಿಷ್ಟು ಅಹಂಕಾರವಿಲ್ಲ ಎಂಬುದು ಇತ್ತೀಚಿಗೆ ನಡೆದ ಕಾರ್ಯಕ್ರವೊಂದರಲ್ಲಿ ಅವರು ತಮ್ಮ ಅಭಿಮಾನಿಯೊಬ್ಬರ ಜೊತೆ ನಡೆದುಕೊಂಡ ರೀತಿಯಿಂದಲ್ಲೇ ತಿಳಿಯುತ್ತದೆ.


ಟಾಲಿವುಡ್ ನ ಸೂಪರ್ ಹಿಟ್ ಸಿನಿಮಾ ಬಾಹುಬಲಿಯಲ್ಲಿ ನಟಿಸಿದ ನಂತರ ನಟ ಪ್ರಭಾಸ್ ಅವರಿಗೆ ಅವಕಾಶಗಳ ಸುರಿಮಳೆಯೇ ಹರಿದುಬರುತ್ತಿದ್ದವು. ಇಂತಹ ಬ್ಯೂಸಿ ಶೆಡುಲ್ ನಲ್ಲೂ ಇತ್ತೀಚಿಗೆ ಅಭಿಮಾನಿಗಳಿಗೋಸ್ಕರ ಬಿಡುವು ಮಾಡಿಕೊಂಡು ಹೈದರಾಬಾದ್ ನಲ್ಲಿ ಮೀಟ್‌ ಆಯಂಡ್ ಗ್ರೀಟ್‌ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಮೂಲಕ ತಮ್ಮ ಅಭಿಮಾನಿಗಳನ್ನು ಮೀಟ್ ಮಾಡುವುದು ಅವರ ಉದ್ದೇಶವಾಗಿತ್ತು.


 ಆದರೆ ಈ ಕಾರ್ಯಕ್ರಮದಲ್ಲಿ ವಿಕಲಚೇತನ ಅಭಿಮಾನಿಯೊಬ್ಬರು ಪ್ರಭಾಸ್ ಅವರ ಜೊತೆ ಫೋಟೋ ತೆಗೆಸಿಕೊಳ್ಳಲು ಬಯಸಿದ್ದಾಗ ಇದಕ್ಕೆ ಒಪ್ಪಿದ ಪ್ರಭಾಸ್ ಅವರು ಅವರ ಪರಿಸ್ಥಿತಿ ಕಂಡು ತಾವೇ ಅವರ ಬಳಿ ಹೋಗಿ ಅಭಿಮಾನಿಯ ಜತೆ ಮಂಡಿಯೂರಿ ಕುಳಿತು ಫೋಟೋ ತೆಗೆಸಿಕೊಂಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಆಯಮಿ ಜಾಕ್ಸನ್ ಡಿ.ಎನ್.ಎ ಟೆಸ್ಟ್ ‌ ಮಾಡಿಸಿಕೊಂಡಿದ್ದು ಇದೇ ಕಾರಣಕ್ಕಾಗಿಯಂತೆ!