Select Your Language

Notifications

webdunia
webdunia
webdunia
webdunia

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ರೈಸಿಂಗ್ ಸ್ಟಾರ್ ಕಿರೀಟಿ ರೆಡ್ಡಿ

Sampriya

ಬೆಂಗಳೂರು , ಬುಧವಾರ, 9 ಜುಲೈ 2025 (18:57 IST)
Photo Credit X
ಗಾಲಿ ಜನಾರ್ದನ ರೆಡ್ಡಿ ಅವರ ಮಗ ಕಿರೀಟಿ ರೆಡ್ಡಿಗೆ ಜೋಡಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಜೋಡಿಯ ಡ್ಯಾನ್ಸ್‌ ವಿಡಿಯೋವೊಂದು ವೈರಲ್ ಆಗಿದೆ. 

ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ರೆಡ್ಡಿ ಅವರು ಮನರಂಜನೆಯ ಜೂನಿಯರ್ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ರಾಧಾ ಕೃಷ್ಣ ನಿರ್ದೇಶನದ ಮತ್ತು ಪ್ರತಿಷ್ಠಿತ ವಾರಾಹಿ ಚಲನ ಚಿತ್ರ ಬ್ಯಾನರ್ ಅಡಿಯಲ್ಲಿ ರಜನಿ ಕೊರ್ರಪಾಟಿ ನಿರ್ಮಿಸಿದ ಚಿತ್ರವು ಜುಲೈ 18 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. 

ದಿನಾಂಕವು ಸಮೀಪಿಸುತ್ತಿರುವಂತೆಯೇ, ತಯಾರಕರು ಪ್ರಚಾರದ ಪ್ರಯತ್ನಗಳನ್ನು ತೀವ್ರಗೊಳಿಸಿದ್ದಾರೆ.ಇದೀಗ ಸಿನಿಮಾದ ವಯ್ಯಾರಿ ಹಾಡು ಭಾರೀ ಸದ್ದು ಮಾಡುತ್ತಿದೆ

ಈ ಹಾಡಿನಲ್ಲಿ ಮೈ ಚಳಿ ಬಿಟ್ಟು ಜೋಡಿ ಡ್ಯಾನ್ಸ್ ಮಾಡಿದ್ದು, ಗಾಯಕರಾದ ಡಿಎಸ್‌ಪಿ ಮತ್ತು ಹರಿಪ್ರಿಯಾ ಅವರ ಗಾಯನ ಹೊಸ ಹವಾ ಸೃಷ್ಟಿ ಮಾಡುತ್ತಿದೆ. 

ರೋಮಾಂಚಕ ಮತ್ತು ವರ್ಣರಂಜಿತ ಸೆಟ್‌ಗಳಲ್ಲಿ ಚಿತ್ರೀಕರಿಸಲಾದ ಮ್ಯೂಸಿಕ್ ವೀಡಿಯೋದಲ್ಲಿ ಕಿರೀತಿ ಮತ್ತು ಶ್ರೀಲೀಲಾ ಅವರು ಕೆಮಿಸ್ಟ್ರಿ ತುಂಬಾನೇ ಚೆನ್ನಾಗಿ ವರ್ಕ್ ಆಗಿದ್ದು,  ಶ್ರೀಲೀಲಾ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.  ಸದ್ಯ ದೃಶ್ಯದ ಚಿತ್ರೀಕರಣ ವಿಡಿಯೋ ವೈರಲ್ ಆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ ನಿಡಿಮೋರು ಜತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ವಿದೇಶದಲ್ಲಿ ಒಟ್ಟಾಗಿ ಆತ್ಮೀಯವಾಗಿ ಕಾಣಿಸಿಕೊಂಡ ಸಮಂತಾ