Publish Date: Wed, 07 Mar 2018 (05:52 IST)
Updated Date: Wed, 07 Mar 2018 (05:56 IST)
ಚೆನ್ನೈ: ಸಾಯುವ ಪಾತ್ರವಿರುವ ಚಿತ್ರಗಳಲ್ಲಿ ಇನ್ನು ಮುಂದೆ ನಟಿ ನಿತ್ಯಾ ಮೆನನ್ ನಟಿಸುವುದಿಲ್ಲವಂತೆ. ಇದಕ್ಕೆ ಕಾರಣವೂ ಇದೆ. ಇರು ಮುಗನ್, 24 ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಿತ್ಯಾಮೆನನ್ ಸಾವನ್ನಪ್ಪುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ.
ಇದರ ಕುರಿತು ಅವರ ಅಭಿಮಾನಿಗಳು ಕೇಳಿದ್ದರಿಂದ ನಿತ್ಯಾ ಮೆನನ್ ಇನ್ನು ಮುಂದೆ ಈ ರೀತಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿಲ್ಲವಂತೆ.
ಸಿನಿಮಾದಲ್ಲಿ ನನ್ನನ್ನು ಕೊಲ್ಲುವ ಅಥವಾ ಮೃತಪಡುವ ಸೀನ್‌ಗಳಿದ್ದರೆ ಅದರಲ್ಲಿ ನಾನು ನಟಿಸುವುದಿಲ್ಲ ಎಂದು ಖಡಕ್ ಆಗಿ ನಿತ್ಯಾ ಹೇಳಿದ್ದಾರೆ. ನಿರ್ದೇಶಕರು ಕಥೆಗೆ ಹೆಚ್ಚಿನ ಭಾವನಾತ್ಮಕ ಟಚ್ ನೀಡುವ ಸಲುವಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಸಹ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ