Select Your Language

Notifications

webdunia
webdunia
webdunia
webdunia

ವೈ.ಎಸ್.ರೆಡ್ಡಿ ಪಾತ್ರಕ್ಕೆ ಸಜ್ಜಾದ ಮಮ್ಮುಟ್ಟಿ

ಸಿನಿಮಾ
ಚೆನ್ನೈ: ಮಲೆಯಾಳಂನ ಮೆಗಾ ಸ್ಟಾರ್ ಮಮ್ಮುಟ್ಟಿ ಅವರು ಹೊಸ ಪಾತ್ರವೊಂದಕ್ಕೆ ಸಜ್ಜಾಗಿದ್ದಾರೆ. ತೆಲುಗಿನ ಯಾತ್ರ ಸಿನಿಮಾದಲ್ಲಿ ಮಮ್ಮುಟ್ಟಿ ಅವರು ಆಂಧ್ರಪ್ರದೇಶದ ದಿವಂಗತ ಮಾಜಿ ಮುಖ್ಯಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.


2004ರಲ್ಲಿ ಮಾಜಿ ಸಿಎಂ ರಾಜಶೇಖರ ರೆಡ್ಡಿ 1475 ಕಿಲೋಮೀಟರ್‌ ಪಾದಯಾತ್ರೆ ಮಾಡಿ ಜನರನ್ನು ಭೇಟಿ ಮಾಡಿದ್ದರು. ಈ ಹಿನ್ನೆಲೆ ವೈಎಸ್‌ಆರ್‌ ರೆಡ್ಡಿ ಜಯಗಳಿಸಿದ್ದರು. ಈ ಎಳೆಯನ್ನೇ ಇಟ್ಟುಕೊಂಡು ಯಾತ್ರ ಸಿನಿಮಾ ತಯಾರಾಗುತ್ತಿದೆಯಂತೆ. ವೈಎಸ್‌ಆರ್‌ ರೆಡ್ಡಿ ಪಾತ್ರಕ್ಕೆ ಮಮ್ಮುಟ್ಟಿಯವರೇ ಸೂಕ್ತ ಎಂದು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂದ ಹಾಗೇ, ಈ ಸಿನಿಮಾಕ್ಕೆ ಮಾಹಿ ರಾಘವ್‌  ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀದೇವಿ ಜೀವನ ಆಧಾರಿತ ಸಿನಿಮಾಕ್ಕೆ ರಾಮ್ ಗೋಪಾಲ್ ವರ್ಮಾ ಸಜ್ಜು!