26 ವರ್ಷದ ಗೆಳತಿಯನ್ನು ವರಿಸಲಿದ್ದಾರೆ 53 ರ ಮಿಲಿಂದ್ ಸೋಮನ್!

ರಾಮಕೃಷ್ಣ

ಬುಧವಾರ, 20 ಡಿಸೆಂಬರ್ 2017 (14:41 IST)
ಮಾಡೆಲ್ ಆಗಿ ನಟರಾದ ಮಿಲಿಂದ್ ಸೋಮನ್ (53 ವರ್ಷ) ಅವರು 26 ವರ್ಷದ ಅಂಕಿತಾ ಕೊನ್ವಾರ್ ಅವರ ಜೊತೆಗಿನ ಸಂಬಂಧದ ಕುರಿತು ಸುದ್ದಿಯಲ್ಲಿದ್ದರು. ಕೆಲವು ವಾರಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಈ ಜೋಡಿಯ ಚಿತ್ರಗಳನ್ನು ಹೆಚ್ಚು ಟ್ರೋಲ್ ಮಾಡಲಾಗಿತ್ತು. 

ನಾವು ಅವರ ಬಗ್ಗೆ ಕೇಳಿದ ಇತ್ತೀಚಿನ ವಿಷಯವೆಂದರೆ, ಈ ಜೋಡಿಯು ಶೀಘ್ರದಲ್ಲಿಯೇ ಹಸೆಮಣೆ ಏರಲು ಸಿದ್ಧವಾಗಿದೆ. 26 ವರ್ಷ ವಯಸ್ಸಿನ ಅಂಕಿತಾ ವೃತ್ತಿಯಿಂದ ಏರ್ ಹೋಸ್ಟೆಸ್ ಆಗಿದ್ದಾರೆ.
 
ಮಿಲಿಂದ್ ಅವರು ಅಂಕಿತಾ ಜೊತೆಗೆ ಡೇಟ್ ಮಾಡುತ್ತಿರುವ ವಿಚಾರ ಅನೇಕರ ವಿರೋಧಕ್ಕೆ ಕಾರಣವಾಗಿದ್ದರೂ, ಅವರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇನ್ನೂ ಮದುವೆಯ ವಿಚಾರದ ಕುರಿತು ಮಿಲಿಂದ್ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
 
ಇತ್ತೀಚಿಗೆ ಮಿಲಿಂದ್ ಗುವಾಹಟಿಯಲ್ಲಿ ಅಂಕಿತಾ ಅವರ ಪೋಷಕರನ್ನು ಭೇಟಿ ಮಾಡಿದ್ದಾರೆ. ಈ ಮೊದಲು ಅವರಿಗೆ ವಯಸ್ಸಿನ ಅಂತರದ ಬಗ್ಗೆ ಬೇಸರ ಹೊಂದಿದ್ದರು. ಆದರೆ ಮಿಲಿಂದ್ ಸೋಮನ್ ಅವರ ಮನವೊಲಿಸಿದರು. ಎಲ್ಲ ಅಂದು ಕೊಂಡಂತೆ ಆದರೆ, ಮಿಲಿಂದ್ ಸೋಮನ್ ಅವರ ಏರಡನೇ ಮದುವೆ 2018 ರಲ್ಲಿ ನಡೆಯಲಿದೆ. ಮಿಲಿಂದ್ 2006 ರಲ್ಲಿ ಮಿಲಿನ್ ಜಂಪನಾಯ್ ಅವರನ್ನು ಮದುವೆಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೋವಾದಲ್ಲಿದೆ ನಿಗೂಢ ತಾಣ ನಿಮಗೆ ಗೊತ್ತೇ!