Webdunia - Bharat's app for daily news and videos

Install App

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ನಡುವೆ ಕುಚ್‌ ಕುಚ್‌?

ಅತಿಥಾ
ಶನಿವಾರ, 3 ಫೆಬ್ರವರಿ 2018 (13:43 IST)
ಬೆಳ್ಳಿ ಪರದೆಗೆ ಪ್ರವೇಶಿಸುವ ಮೊದಲೇ ರಣಬೀರ್ ಕಪೂರ್ ತಮ್ಮ ಅಚ್ಚುಮೆಚ್ಚಿನ ನಾಯಕರಾಗಿದ್ದಾರೆ ಎಂದು ಆಲಿಯಾ ಭಟ್ ವ್ಯಕ್ತಪಡಿಸಿದ್ದರು. ವಿಷ್ಯಾ ಏನಂದರೆ ತಮ್ಮ ಮೆಚ್ಚಿನ ನಾಯಕರಾದ ರಣಬೀರ್ ಕಪೂರ್ ಅವರ ಜೊತೆಗೆ 'ಬ್ರಹ್ಮಸ್ತ್ರಾ' ಎಂಬ ಶೀರ್ಷಿಕೆಯ ಟ್ರೈಲಾಜಿ ಚಿತ್ರದಲ್ಲಿ ಆಲಿಯಾ ನಟಿಸಲು ಸಿದ್ಧರಾಗಿದ್ದಾಗಿರೆ.
ಅದೇನಿದ್ದರೂ, ಚಿತ್ರಕ್ಕಿಂತ ಹೆಚ್ಚಾಗಿ, ಈ ಎರಡು ತಾರೆಯರ ನಡುವೆ ಬೆಳೆಯುತ್ತಿರುವ ಗೆಳೆತನದ ಕುರಿತು ಜನರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
 
ಮೂಲಗಳ ಪ್ರಕಾರ ಈ ಜೋಡಿಯು ಕೆಲವು ದಿನಗಳಿಂದ ಜೊತೆಯಾಗಿ ಕಾಣಿಸಿಕೊಳ್ಳುತ್ತಿದೆ. ಶೂಟಿಂಗ್ ಇಲ್ಲದಿದ್ದಾಗ ಸಹ, ರಣಬೀರ್ ಆಲಿಯಾ ಜೊತೆಯಲ್ಲಿರಲು ಬಯಸುತ್ತಾರಂತೆ.
 
ಇತ್ತೀಚೆಗೆ, ಇಬ್ಬರೂ ಟೆಲ್ ಅವಿವ್‌ನಲ್ಲಿದರು ಎಂಬ ವದಂತಿಗಳು ಇದ್ದವು. ಆದರೆ ಬ್ರಹ್ಮಸ್ತದ ನಿರ್ದೇಶಕ ಅಯಾನ್ ಮುಖರ್ಜಿ ಸಹ ಅವರೊಂದಿಗೆ ಅಲ್ಲಿದ್ದರು. ಇದೀಗ, ಇತ್ತೀಚಿನ ವರದಿಗಳು ಅವರು ಪರಸ್ಪರ ರಹಸ್ಯವಾಗಿ ಭೇಟಿಯಾಗಲು ಪ್ರಾರಂಭಿಸಿದ್ದಾರೆ, ಎಂದು ತಿಳಿಸಿದೆ.
 
ಈ ವಾರದ ಪ್ರಾರಂಭದಲ್ಲಿ, 'ರಾಕ್‌ಸ್ಟಾರ್' ನಟ ಅಲಿಯಾಳ ಮನೆಗೆ ರಾತ್ರೆ 11 ಗಂಟೆಗೆ ಬಂದು ಮರುದಿನ ಬೆಳಗ್ಗೆ 7 ಗಂಟೆಗೆ ಹೊರಟಿದ್ದರಂತೆ.
 
ಆಲಿಯಾ, ರಣಬೀರ್‌ನ ಮಾಜಿ ಗೆಳತಿಯಾದ ಕತ್ರಿನಾ ಕೈಫ್ ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದಾರೆ ಎಂಬುದು  ಗಮನಿಸಬೇಕಾದ ವಿಷಯ. ಬಿಎಫ್ಎಫ್ ವಿಥ್ ವೊಗ್‌ ಎಂಬ ಕಾರ್ಯಕ್ರಮದಲ್ಲಿ ಕತ್ರಿನಾಗೆ ಸಲಹೆ ನೀಡುತ್ತಾ, ಅಲಿಯಾ "ಜಿಮ್ ಅನ್ನು ಬಿಟ್ಟು ಪುರುಷರ ಮೇಲೆ ಗಮನ ಹರಿಸು" ಎಂದು ಹೇಳಿದ್ದರು, ಅದಕ್ಕೆ ಉತ್ತರಿಸುತ್ತಾ "ಅಲಿಯಾ ಯಾವಾಗ ಮದುವೆಯಾಗಲಿದ್ದಾಳೆ ಎಂದು ನಾನು ಕಾಯುತ್ತಿದ್ದೇನೆ "ಎಂದು ಹೇಳಿದ್ದಳು.
 
ರಣಬೀರ್ ಜೊತೆಗೆ ಬೆಳೆಯುತ್ತಿರುವ ಅಲಿಯಾಳ ನಿಕಟತೆಯು ಎರಡು ಆತ್ಮೀಯ ಸ್ನೇಹಿತರ ನಡುವೆ ಘರ್ಷಣೆಯನ್ನು ಉಂಟುಮಾಡಲಿದಿಯೇ ಎಂದು ಕಾದು ನೋಡಬೇಕು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments