ಮೊದಲ ಮಗುವಿಗೆ ಜನ್ಮವಿತ್ತ ಕತ್ರಿನಾ ಕೈಫ್: ವಿಕ್ಕಿ ಕೌಶಾಲ್ ಮನೆಯಲ್ಲಿ ಸಂಭ್ರಮ

Krishnaveni K
ಶುಕ್ರವಾರ, 7 ನವೆಂಬರ್ 2025 (11:43 IST)
ಮುಂಬೈ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮೊದಲ ಮಗುವಿಗೆ ಜನ್ಮವಿತ್ತಿದ್ದು, ಈ ವಿಚಾರವನ್ನು ಪತಿ ವಿಕ್ಕಿ ಕೌಶಾಲ್ ಸೋಷಿಯಲ್ ಮೀಡಿಯಾದಲ್ಲಿ ಸಂಭ್ರಮದಿಂದ ಹಂಚಿಕೊಂಡಿದ್ದಾರೆ.

ನಮ್ಮ ಸಂತೋಷದ ಕ್ಷಣ ಬಂದಿದೆ. ನಾವು ಗಂಡು ಮಗುವನ್ನು ಬರಮಾಡಿಕೊಂಡಿದ್ದೇವೆ’ ಎಂದು ವಿಕ್ಕಿ ಕೌಶಾಲ್ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಸಾಕಷ್ಟು ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಮೊನ್ನೆಯಷ್ಟೇ ಸೆಪ್ಟೆಂಬರ್ ನಲ್ಲಿ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದರು. 2021 ರಲ್ಲಿ ಕತ್ರಿನಾ ಮತ್ತು ವಿಕ್ಕಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.

ಕಳೆದ ವರ್ಷ ಕತ್ರಿನಾ ಕೈಫ್ ಸಂತಾನ ಭಾಗ್ಯಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ಆಶ್ಲೇಷ ಪೂಜೆ, ನಾಗ ಸೇವೆ ಮಾಡಿಕೊಂಡು ಹೋಗಿದ್ದರು. ಇದಾಗಿ ಕೆಲವೇ ಸಮಯದಲ್ಲಿ ದಂಪತಿ ಮೊದಲ ಮಗುವಿನ ಆಗಮನದ ವಿಚಾರ ಹಂಚಿಕೊಂಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಎಲ್ಲರೆದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಕ್ಕಿದ ವಿಜಯ್ ದೇವರಕೊಂಡ video

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಮುಂದಿನ ಸುದ್ದಿ
Show comments