2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್‌ನ ಖ್ಯಾತ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಅಂದಹಾಗೆ, ಕತ್ರಿನಾ ಮತ್ತು ವಿಕ್ಕಿ ಮದುವೆಯಾದ ಸಮಯದಿಂದ ಜನರು ಒಂದೇ ಒಂದು ಪ್ರಶ್ನೆಯನ್ನು ಕೇಳುತ್ತಿದ್ದಾರೆ, ಈ ಜೋಡಿಯು ಯಾವಾಗ ಗುಡ್ ನ್ಯೂಸ್ ನೀಡಲಿದ್ದಾರೆಂದು.
ಪದೇ ಪದೇ, ವಿಕ್ಕಿ ಮತ್ತು ಕತ್ರಿನಾ ತಮ್ಮ ಪ್ರೆಗ್ನೆನ್ಸಿ ರೂಮರ್ಸ್ ಇದೆ. ಇದೀಗ ಮತ್ತೇ ಈ ಜೋಡಿ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದೆ ಎಂಬ ವದಂತಿ ಹರಿದಾಡುತ್ತಿದೆ. ಆದರೆ ಇದು ನಿಜವ ಸುಳ್ಳಾ ಎಂದು ಇನ್ನಷ್ಟೇ ತಿಳಿದುಬರಬೇಕಿದೆ. ಈ ಜೋಡಿ ಇದುವರೆಗೆ ಈ ಬಗ್ಗೆ ಸ್ಪಷ್ಟಣೆಯನ್ನು ನೀಡಿಲ್ಲ.
ಕಳೆದ ಮೂರ್ನಾಲ್ಕು ದಿನಗಳಿಂದ ಕತ್ರಿನಾ ಕೈಫ್ ಗರ್ಭ ಧರಿಸಿರುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಕತ್ರಿನಾ ಅವರು ನವೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ ಎನ್ನಲಾಗಿದೆ.
ವಿಕ್ಕಿ ಅಥವಾ ಕತ್ರಿನಾ ಅಂತಹ ಯಾವುದೇ ಗಾಸಿಪ್ ಅನ್ನು ಎಂದಿಗೂ ದೃಢಪಡಿಸಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ನಾಲ್ಕು ವರ್ಷಗಳಿಂದ ಒಂದೇ ರೀತಿಯ ಊಹಾಪೋಹಗಳು ಯಾವುದೇ ಆಧಾರವಿಲ್ಲದೆ ಪ್ರಸಾರವಾಗುತ್ತಿರುವುದನ್ನು ಗಮನಿಸಿದರೆ ಈ ಬಜ್ ನಿಜವಲ್ಲ ಎನ್ನಲಾಗಿದೆ.