ಬೆಂಗಳೂರು: ಬಾಲಿವುಡ್‌ನ ಗೋಲ್ಡನ್ ಜೋಡಿಗಳಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಅಧಿಕೃತವಾಗಿ ಘೋಷಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಈ ಜೋಡಿ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ವದಂತಿ ಹಬ್ಬುತ್ತಲೇ ಇತ್ತು. ಇದೀಗ ಈ ಜೋಡಿ ಸೆಪ್ಟೆಂಬರ್ 23 ರಂದು ಇಬ್ಬರೂ ತಮ್ಮ ಮೊದಲ ಮಗುವನ್ನು ನಿರೀಕ್ಷಿಯಲ್ಲಿರುವುದಾಗಿ ಘೋಷಣೆ ಮಾಡಿದ್ದಾರೆ. ಇದು ನಮ್ಮ ಜೀವನದ ಅತ್ಯುತ್ತಮ ಅಧ್ಯಾಯ ಎಂದು ಬರೆದುಕೊಂಡಿದ್ದಾರೆ.
2021ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ, ನಾಲ್ಕು ವರ್ಷಗಳ ಬಳಿಕ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಪ್ರೀತಿಸಿ, ಮದುವೆಯಾದ ಈ ಜೋಡಿ, ಬಾಲಿವುಡ್‌ನ ಸ್ಟಾರ್ ಕಪಲ್ ಅಂತಾ ಹೇಳಿದ್ರು ತಪ್ಪಾಗಲ್ಲ.
ಇನ್ನು ವಿಕ್ಕಿ ಕೌಶಲ್ ಅವರು ಕತ್ರಿನಾ ಕೈಫ್‌ಗಿಂತ 5 ವರ್ಷ ಚಿಕ್ಕವರು. ವಿಕ್ಕಿಗೆ ಇದೀಗ 37 ವರ್ಷ ಆದ್ರೆ, ಕತ್ರಿನಾ ಕೈಫ್‌ಗೆ 42 ವರ್ಷ ನಡೆಯುತ್ತಿದೆ. ಒಟ್ಟಾರೆ ಈ ಜೋಡಿ ಮೊದಲ ಮಗುವನ್ನು ಸ್ವಾಗತಿಸುತ್ತಿರುವುದಕ್ಕೆ ಬಾಲಿವುಡ್ ಸ್ಟಾರ್ಸ್ ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.