ಬೆಂಗಳೂರು: ಬಾಲಿವುಡ್ ಸ್ಟಾರ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆಂಬ ಬಾಲಿವುಡ್ ಅಂಗಳದಲ್ಲಿ ಜೋರಾಗಿ ಸದ್ದು ಮಾಡುತ್ತಿದೆ.
ಆದರೆ ಇದುವರೆಗೆ ಈ ವಿಚಾರವನ್ನು ದಂಪತಿಗಳು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ. ಸ್ಟಾರ್ ಜೋಡಿ ಮಗು ಅಕ್ಟೋಬರ್-ನವೆಂಬರ್‌ನಲ್ಲಿ ಬರಲಿದೆ ಎಂದು ಮಾಧ್ಯಮಗಳು ಖಚಿತಪಡಿಸಿದೆ.
ಕಳೆದ ಕೆಲ ತಿಂಗಳಿನಿಂದ ಕತ್ರಿನಾ ಕೈಫ್ ಗರ್ಭಧಾರಣೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಲೇ ಇದೆ. ಆದರೆ ವಿಕ್ಕಿ ಆಗಲಿ ಕತ್ರಿನಾ ಆಗಲಿ ಈ ಬಗ್ಗೆ ಮೌನ ಮುರಿದಿಲ್ಲ.
ಈ ವರ್ಷದ ಮಾರ್ಚ್‌ನಲ್ಲಿ ನಟ ಕತ್ರಿನಾ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಇವರ ಭೇಟಿ ಹಿಂದೆ ಸಂತಾನ ಪ್ರಾಪ್ತಿಗಾಗಿ ವಿಶೇಷ ಬೇಡಿಕೆಯಿತ್ತು ಎನ್ನಲಾಗಿತ್ತು.
ಇನ್ನೂ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಜಾತಕದಲ್ಲಿ ಕಾಣಿಸಿಕೊಳ್ಳುವ ಸರ್ಪದೋಷ ಸಂಬಂಧ ಇಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇನ್ನೂ ಕೆಲವರಿಗೆ ನಾಗ ದೋಷದಿಂದಾಗಿ ಸಂತಾನ ಪ್ರಾಪ್ತಿಯು ತಡವಾಗುತ್ತದೆ. ಇಲ್ಲಿ ಜಾತಕ ದೋಷದಲ್ಲಿ ಕಾಣಿಸಿಕೊಳ್ಳುವ ನಾಗದೋಷಕ್ಕೆ ಪೂಜೆ ಸಲ್ಲಿಸಿದ್ದಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ.
ಇನ್ನೂ ಸಂತಾನ ಪ್ರಾಪ್ತಿಗಾಗಿಯೇ ಕತ್ರಿನಾ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು ಎನ್ನಲಾಗಿತ್ತು.
ವರ್ಷದ ಹಿಂದೆ ಬ್ಯಾಡ್ ನ್ಯೂಜ್‌ನ ಟ್ರೇಲರ್ ಬಿಡುಗಡೆಯ ಸಂದರ್ಭದಲ್ಲಿ, ಕತ್ರಿನಾ ಕೈಫ್ ಸುತ್ತ ನಡೆಯುತ್ತಿರುವ ಗರ್ಭಧಾರಣೆಯ ಬಝ್ ಕುರಿತು ವಿಕ್ಕಿ ಕೌಶಲ್ ಅವರನ್ನು ಪ್ರಶ್ನಿಸಲಾಯಿತು.
"ಒಳ್ಳೆಯ ಸುದ್ದಿಗೆ ಸಂಬಂಧಿಸಿದಂತೆ ದಂಪತಿಗಳು ಗರ್ಭಿಣಿಯಾಗಿದ್ದಾರೆ) ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವು ತುಂಬಾ ಸಂತೋಷಪಡುತ್ತೇವೆ, ಆದರೆ ಸದ್ಯಕ್ಕೆ ಊಹಾಪೋಹಗಳಲ್ಲಿ ಯಾವುದೇ ಸತ್ಯವಿಲ್ಲಎಂದಿದ್ದರು.