Webdunia - Bharat's app for daily news and videos

Install App

ರಶ್ಮಿಕಾ ಬಳಿಕ ಡೀಪ್ ಫೇಕ್ ಸಂಕಷ್ಟಕ್ಕೀಡಾದ ಕತ್ರಿನಾ ಕೈಫ್

Webdunia
ಬುಧವಾರ, 8 ನವೆಂಬರ್ 2023 (09:30 IST)
ಮುಂಬೈ: ನಟಿ ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ ಬೆನ್ನಲ್ಲೇ ಮತ್ತೊಬ್ಬ ಬಾಲಿವುಡ್ ನಟಿ ಕತ್ರಿನಾ ಕೈಫ್ ಕೂಡಾ ಇದೇ ಸಂಕಷ್ಟಕ್ಕೀಡಾಗಿದ್ದಾರೆ.

ರಶ್ಮಿಕಾರಂತೇ ಕತ್ರಿನಾ ಅವರ ನಕಲಿ ವಿಡಿಯೋ ಮಾಡಿ ಹರಿಯಬಿಡಲಾಗಿದೆ. ಕತ್ರಿನಾ ಅವರ ಟೈಗರ್ 3 ಸಿನಿಮಾದ ವಿಡಿಯೋವನ್ನು ನಕಲಿ ಮಾಡಿ ಹರಿಯಬಿಡಲಾಗಿದೆ. ಕತ್ರಿನಾ ಟವೆಲ್ ಫೈಟ್ ಮಾಡುವ ಸನ್ನಿವೇಶವನ್ನು ನಕಲಿ ಮಾಡಲಾಗಿದೆ. ಆದರೆ ಇದುವರೆಗೆ ಕತ್ರಿನಾ ಈ ಬಗ್ಗೆ ಮಾತನಾಡಿಲ್ಲ.

ರಶ್ಮಿಕಾ ಪ್ರಕರಣವಾಗುತ್ತಿದ್ದಂತೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಸೇರಿದಂತೆ ಅನೇಕ ಸಿನಿ ತಾರೆಯರು ಈ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಕೂಡಾ ಇಂತಹ ಕೃತ್ಯವೆಸಗುವವರಿಗೆ ಗರಿಷ್ಠ 3 ವರ್ಷ ಜೈಲು ಮತ್ತು 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಹಾಗಿದ್ದರೂ ಮತ್ತೊಬ್ಬ ನಟಿಗೆ ಈಗ ಇದೇ ಸಮಸ್ಯೆ ಎದುರಾಗಿರುವುದು ದುರದೃಷ್ಟಕರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತ್ ಶೆಟ್ಟಿ ಎಲ್ಲಿ ಹೋಗಿದ್ದಾರೆ, ರಾಜ್ ಬಿ ಶೆಟ್ಟಿ ಕೊಟ್ರು ಅಪ್ ಡೇಟ್

ಕೂಲಿ ಸಿನಿಮಾ ಟಿಕೆಟ್ ದರ ಯದ್ವಾ ತದ್ವಾ ಏರಿಕೆ: ಕೇಳೋರೇ ಇಲ್ಲ

ನಟ ಧನುಷ್ ಜತೆ ಡೇಟಿಂಗ್ ವದಂತಿ, ಕೊನೆಗೂ ಮೌನ ಮುರಿದ ಮೃಣಾಲ್ ಠಾಕೂರ್‌

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಹಿರಿಯ ನಟಿ ಜಯಾ ಬಚ್ಚನ್ ಹೀಗೇ ನಡೆಸಿಕೊಳ್ಳುವುದಾ, ವಿಡಿಯೋ ವೈರಲ್

ಮುಂದಿನ ಸುದ್ದಿ
Show comments