ಮುಂಬೈ: ನಟ ಸೈಫ್ ಅಲಿ ಖಾನ್ ಮೇಲೆ ನಿನ್ನೆ ತಡರಾತ್ರಿ ನಡೆದ ದಾಳಿಯ ವೇಳೆ ಪತ್ನಿ, ನಟಿ ಕರೀನಾ ಕಪೂರ್ ತಮ್ಮ ಗರ್ಲ್ಸ್ ಗ್ಯಾಂಗ್ ಜೊತೆ ಪಾರ್ಟಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಸೈಫ್ ಅಲಿ ಖಾನ್ ಮುಂಬೈ ನಿವಾಸದಲ್ಲಿ ನಿನ್ನೆ ತಡರಾತ್ರಿ ನುಗ್ಗಿದ್ದ ಕಳ್ಳರು ಮೊದಲು ಮನೆಕೆಲಸದವರ ಮೇಲೆ ದಾಳಿಗೆ ಯತ್ನಿಸಿದ್ದರು. ಈ ವೇಳೆ ಅವರನ್ನು ರಕ್ಷಿಸಲು ಸೈಫ್ ಧಾವಿಸಿದ್ದರು. ಆಗ ಸೈಫ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಸೈಫ್ ಅಲಿ ಖಾನ್ ಗೆ ಗಂಭೀರ ಗಾಯವಾಗಿತ್ತು. ತಕ್ಷಣವೇ ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ದಾಳಿಯ ಸಂದರ್ಭದಲ್ಲಿ ಕರೀನಾ ಎಲ್ಲಿದ್ದರು ಎಂಬುದು ಈಗ ಬಯಲಾಗಿದೆ.
ಈ ದಿನ ರಾತ್ರಿ ಕರೀನಾ, ತಮ್ಮ ಕುಟುಂಬದವರೇ ಆದ ನಟಿ ಸೋನಂ ಕಪೂರ್ ಮತ್ತಿತರರ ಜೊತೆ ಪಾರ್ಟಿ ಮಾಡಲು ತೆರಳಿದ್ದರು. ಈ ಫೋಟೋಗಳನ್ನೂ ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಘಟನೆ ವೇಳೆ ಕರೀನಾ ಮನೆಯಲ್ಲಿರಲಿಲ್ಲ. ಹೀಗಾಗಿ ಕರೀನಾ ಮತ್ತು ಮಕ್ಕಳು ದಾಳಿಯಿಂದ ಬಚಾವ್ ಆಗಿದ್ದಾರೆ.