Select Your Language

Notifications

webdunia
webdunia
webdunia
webdunia

Saif Ali Khan: ಸೈಫ್ ಅಲಿ ಖಾನ್ ಮನೆಗೆ ನುಗ್ಗಿ ಚಾಕು ಇರಿತ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Saif Ali Khan

Krishnaveni K

ಮುಂಬೈ , ಗುರುವಾರ, 16 ಜನವರಿ 2025 (08:47 IST)
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ದರೋಡೆಕೋರರು ನಟನಿಗೆ ಚಾಕುವಿನಿಂದ ಇರಿದು ಗಂಭೀರ ಗಾಯಗೊಳಿಸಿದ ಶಾಕಿಂಘ್ ಘಟನೆ ನಡೆದಿದೆ.
 
ನಿನ್ನೆ ತಡರಾತ್ರಿ ಘಟನೆ ಸಂಭವಿಸಿದ್ದು ನಟನನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನ ಮನೆಯಲ್ಲಿ ಘಟನೆ ನಡೆದಿದೆ. ಸೈಫ್ ಶ್ರೀಮಂತ ನಟನಾಗಿರುವುದರಿಂದ ಅವರ ಮನೆ ದರೋಡೆ ಮಾಡಲು ಕಳ್ಳರು ಯತ್ನಿಸಿದ್ದರು.
 
ಈ ವೇಳೆ ಕುಟುಂಬದವರೊಂದಿಗೆ ಮನೆಯಲ್ಲಿದ್ದ ಸೈಫ್ ಅಲಿ ಖಾನ್ ಕಳ್ಳರನ್ನು ತಡೆಯಲು ಪ್ರಯತ್ನಿಸಿದ್ದರು. ತಡರಾತ್ರಿ ಸುಮಾರು 2.30 ರ ವೇಳೆಗೆ ಘಟನೆ ನಡೆದಿದೆ.
 
ಸೈಫ್ ತಡೆಯಲು ಹೋದಾಗ ಕಳ್ಳರು ನಟನಿಗೆ ಚಾಕುವಿನಿಂದ ಇರಿದಿದ್ದಾರೆ. ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾರೆ. ತಕ್ಷಣವೇ ಸೈಫ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಲು ಸಾಲು ಸಂಕಷ್ಟಗಳ ಬಳಿಕ ಅಹಲ್ಯದೇವಿ ದೇವಿಯ ಮೊರೆ ಹೋದ ದರ್ಶನ್‌