ಎಷ್ಟೇ ದುಡ್ಡು ಮಾಡಿದ್ರೂ ಕರೀನಾ ಕಪೂರ್ ಗೆ ಇದೊಂದು ಬಯಕೆ ಈಡೇರಲಿಲ್ವಾ ಎಂದು ಬೇಸರ!

ಭಾನುವಾರ, 23 ಡಿಸೆಂಬರ್ 2018 (09:52 IST)
ಮುಂಬೈ: ಚಿಕ್ಕ ವಯಸ್ಸಿನಲ್ಲೇ ಬೆಳ್ಳಿ ತೆರೆಗೆ ಬಂದು ಬಾಲಿವುಡ್ ನಲ್ಲಿ ನಂ.1 ಸ್ಥಾನ ಪಡೆದಿದ್ದ ಕರೀನಾ ಕಪೂರ್ ಗೆ ಒಂದೇ ಒಂದು ಬೇಸರ ಕಾಡುತ್ತಿದೆಯಂತೆ.  ಅದೇನಪ್ಪಾ ಇಷ್ಟೊಂದು ದುಡ್ಡು, ಹೆಸರು ಮಾಡಿದ್ದು ಸಾಕಾಗಲಿಲ್ವಾ ಎಂದುಕೊಳ್ಳುತ್ತೀರಾ?


ಕರೀನಾ ಕಪೂರ್ ಗೆ ಕಾಡುತ್ತಿರುವ ಒಂದೇ ಒಂದು ನೋವು ಎಂದರೆ ಇಷ್ಟು ಖ್ಯಾತಿ ಪಡೆದು ಶೈಕ್ಷಣಿಕವಾಗಿ ತನಗೆ ಒಂದು ಡಿಗ್ರಿ ಕೂಡಾ ಇಲ್ವಲ್ಲಾ ಎಂಬುದು. ತಾನು ಕಾಲೇಜು ಶಿಕ್ಷಣ ಮುಗಿಸಿಯೇ ಅಭಿನಯ ಫೀಲ್ಡ್ ಗೆ ಬರಬೇಕಿತ್ತು ಎಂದು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಕರೀನಾ ಪಶ್ಚಾತ್ತಾಪದಿಂದ ಹೇಳಿಕೊಂಡಿದ್ದಾರೆ.

17 ವರ್ಷಕ್ಕೇ ಬಣ್ಣ ಹಚ್ಚಿದ ಕರೀನಾ ಆಮೇಲೆ ತಿರುಗಿ ನೋಡಿದ್ದೇ ಅಲ್ಲ. ಒಂದಾದ ಮೇಲೆ ಒಂದರಂತೆ ಸಿನಿಮಾ ಮಾಡಿ ಇದೀಗ ಸೈಫ್ ಆಲಿ ಖಾನ್ ರನ್ನು ವಿವಾಹವಾಗಿದ್ದಾರೆ. ಇಂದಿನ ದಿನಗಳಲ್ಲಿ ಶಿಕ್ಷಣ ಎಂಬುದು ತುಂಬಾ ಮುಖ್ಯ. ನಾನೂ ಡಿಗ್ರಿ ಮುಗಿಸಬೇಕಿತ್ತು ಎಂದು ಕರೀನಾ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಅಬ್ಬಾ...!! ಪ್ರಿಯಾಂಕ-ನಿಕ್ ಜೋಡಿ ಅದೆಷ್ಟು ಆರತಕ್ಷತೆ ಮಾಡುತ್ತಾರೋ!!