Webdunia - Bharat's app for daily news and videos

Install App

ಕಬಡ್ಡಿ ಆಟಗಾರ್ತಿಯ ಪಾತ್ರದಲ್ಲಿ ನಟಿಸಲಿದ್ದಾರೆ ಕಂಗನಾ ರಣಾವತ್!

Webdunia
ಮಂಗಳವಾರ, 21 ಆಗಸ್ಟ್ 2018 (19:08 IST)
ಬರೇಲಿ ಕಿ ಬರ್ಫಿ ಮತ್ತು ನೀಲ್ ಬತ್ತಿ ಸನ್ನಾಟಾ ಖ್ಯಾತಿಯ ನಿರ್ದೇಶಕಿ ಅಶ್ವಿನಿ ಐಯರ್ ತಿವಾರಿ ಮಂಗಳವಾರ "ಪಂಗಾ" ಎಂಬ ಹೆಸರಿನ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರಣಾವತ್ ಓರ್ವ ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಕುರಿತು ವಿಶಿಷ್ಟ ರೀತಿಯಲ್ಲಿ ಹೇಳಿಕೊಂಡ ಅಶ್ವಿನಿ ಐಯರ್ ಕಂಗನಾ ರಣಾವತ್, ನೀನಾ ಗುಪ್ತಾ ಮತ್ತು ಜಸ್ಸಿ ಗಿಲ್ ಹಾಗೂ ಅವರ ಕುಟುಂಬದವರಿರುವ ಸ್ನ್ಯಾಪ್‌ಶಾಟ್‌ ವೀಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ "ನನ್ನ ಪ್ರೀತಿಪಾತ್ರರು ನನ್ನ ಮೇಲಿಟ್ಟ  ನಂಬಿಕೆಯೇ ನನ್ನಲ್ಲಿ ಪ್ರತಿಫಲನವಾಗಿದೆ. ಕಂಗನಾ ರಣಾವತ್, ಜಸ್ಸಿ ಗಿಲ್, ನೀನಾ ಗುಪ್ತಾ, ನಿರ್ಮಾಪಕ ಸಂಸ್ಥೆ ಫೋಕ್ಸ್ ಸ್ಟಾರ್ ಹಿಂದಿ "ಪಂಗಾ" ಚಿತ್ರದ ಬೆಂಬಲಕ್ಕಿದ್ದಾರೆ. 2019 ರಲ್ಲಿ ಚಿತ್ರ ತೆರೆ ಕಾಣಲಿದೆ. ಎಂದು ಸಹ ಬರೆದಿದ್ದಾರೆ.
 
ಈ ಚಿತ್ರವು ಪ್ರೇಕ್ಷಕರಲ್ಲಿ ನಗು, ಅಳು, ಕನಸುಗಳು ಎಲ್ಲವನ್ನು ಒಟ್ಟಿಗೆ ತರಲಿದೆ ಎಂದೆ ನಿರ್ಮಾಣ ಸಂಸ್ಥೆ ಫೋಕ್ಸ್ ಸ್ಟಾರ್ ಹಿಂದಿ ಹೇಳಿಕೆ ನೀಡಿದೆ. 
 
ಚಿತ್ರದಲ್ಲಿ ಕಬಡ್ಡಿ ಆಟಗಾರ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಕಂಗನಾ "ಅಶ್ವಿನಿ ಪಾಂಗಾ ಕಥೆಯನ್ನು ನಿರೂಪಿಸಿದಾಗ, ನನಗೆ ಬಹಳ ಇಷ್ಟವಾಯಿತು. ನನ್ನ ಕಷ್ಟ ಸುಖದಲ್ಲಿ ನನ್ನ ಕುಟುಂಬವು ಯಾವಾಗಲೂ ನನ್ನ ಬೆಂಬಲಕ್ಕೆ ನಿಲ್ಲುತ್ತದೆ. ಈ ಚಿತ್ರದ ಭಾವನೆಗಳು ನಿಜವಾಗಿಯೂ ನನ್ನ ಜೀವನಕ್ಕೆ ಸಂಬಂಧಿಸಿದೆ. ಜೊತೆಗೆ ಅಶ್ವಿನಿಯ ಕಥೆಗಳು ವಿಭಿನ್ನ ಶೈಲಿಯ ಚಿತ್ರಗಳಿಗಾಗಿ ಹೆಸರುವಾಸಿಯಾಗಿದೆ. ನಾನು ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ್ತಿಯ ಪಾತ್ರವನ್ನು ಮಾಡುತ್ತೀರುವುದರಿಂದ ಇದು ನನಗೆ ದುಪ್ಪಟ್ಟು ವಿಶೇಷವಾಗಿದೆ." ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments