ನೆಟ್ ಫ್ಲಿಕ್ಸ್ ಸಿನಿಮಾದಲ್ಲಿ ಉಗ್ರರಿಗೆ ಮುಸ್ಲಿಂ ಹೆಸರು ಮರೆ ಮಾಚಿ ಹಿಂದೂ ಹೆಸರು: ಇದ್ಯಾವ ನ್ಯಾಯ

Krishnaveni K
ಬುಧವಾರ, 4 ಸೆಪ್ಟಂಬರ್ 2024 (09:51 IST)
ನವದೆಹಲಿ: 1999 ರಲ್ಲಿ ತಾಲಿಬಾನ್ ಉಗ್ರರು ನಡೆಸಿದ್ದ ಏರ್ ಇಂಡಿಯಾ ವಿಮಾನ ಅಪಹರಣದ ಕತೆ ಹೊಂದಿರುವ ಇತ್ತೀಚೆಗೆ ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿದ್ದ ಐಸಿ 814 ಚಿತ್ರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ನೆಟ್ ಫ್ಲಿಕ್ಸ್ ತಪ್ಪು ತಿದ್ದಿಕೊಂಡಿದೆ.

ಕಂದಹಾರ್ ವಿಮಾನ ಅಪಹರಣ ಮಾಡಿದ್ದು ಮುಸ್ಲಿಂ ಉಗ್ರರು. ಆದರೆ ಸಿನಿಮಾದಲ್ಲಿ ಉಗ್ರರ ಪಾತ್ರಕ್ಕೆ ಹಿಂದೂ ಹೆಸರು ನೀಡಲಾಗಿದೆ. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಸ್ವತಃ ಕೇಂದ್ರ ಸರ್ಕಾರವೇ ಮಧ್ಯಪ್ರವೇಶಿಸಿ ನೆಟ್ ಫ್ಲಿಕ್ಸ್ ಇಂಡಿಯಾ ಮುಖ್ಯಸ್ಥರನ್ನು ಕರೆಸಿಕೊಂಡು ತರಾಟೆಗೆ ತೆಗೆದುಕೊಂಡಿತ್ತು.

ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ನೆಟ್ ಫ್ಲಿಕ್ಸ್ ಹಿಂದೂ ಹೆಸರುಗಳ ಬದಲು ನಿಜವಾದ ಅಪಹರಣಕಾರರ ಹೆಸರು ಬಳಸಲು ಮುಂದಾಗಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. 1999 ರಲ್ಲಿ ನಡೆದಿದ್ದ ವಿಮಾನ ಅಪಹರಣದಲ್ಲಿ ತಾಲಿಬಾನ್ ಉಗ್ರರಾದ ಇಬ್ರಾಹಿಂ ಅಖ್ತರ, ಶಾಹಿದ್್ ಅಖ್ತರ್ ಸೈದ್, ಸನ್ನಿ ಅಹ್ಮದ್ ಖಾಜಿ, ಜಹೂರ್ ಮಿಸ್ತೀ, ಮತ್ತು ಶಾಖೀರ್ ಭಾಗಿಯಾಗಿದ್ದರು.

ಆದರೆ ಸಿನಿಮಾದಲ್ಲಿ ಈ ಹೆಸರುಗಳ ಬದಲು ಹಿಂದೂ ಹೆಸರುಗಳಾದ ಭೋಲಾ, ಶಂಕರ್, ಡಾಕ್ಟರ್, ಬರ್ಗರ್, ಚೀಫ್ ಎಂದು ಇಡಲಾಗಿದೆ. ಒಂದೇ ಒಂದು ಮುಸ್ಲಿಂ ಹೆಸರಿಲ್ಲ. ನಿಜವಾದ ಭಯೋತ್ಪಾದಕರ ಹೆಸರು ಮರೆಮಾಚಿ ಹಿಂದೂ ಹೆಸರುಗಳನ್ನು ಬಳಕೆ ಮಾಡುವುದರ ಉದ್ದೇಶವೇನು ಎಂದು ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಹೆಸರುಗಳನ್ನು ಬದಲಾಯಿಸಿರುವುದಾಗಿ ನೆಟ್ ಫ್ಲಿಕ್ ಸ್ಪಷ್ಟನೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ದಿಲೀಪ್ ಪರ ತೀರ್ಪು ಹೊರಬೀಳುತ್ತಿದ್ದ ಹಾಗೇ ವಾವ್ಹ್‌ ಜಸ್ಟ್‌ ವಾವ್ಹ್‌ ಎಂದ ಗಾಯಕಿ

ನಿಮ್ಮೊಂದಿಗಿನ ಸಂತೋಷದ ನೆನಪುಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ: ಹೇಮಾ ಮಾಲಿನ ಭಾವುಕ ಫೋಸ್ಟ್

ಆಕೆ ಹೇಳಿಕೆ ಬಳಿಕ ನನ್ನ ವಿರುದ್ಧ ಸಂಜು, ದಿಲೀಪ್‌ಗೂ ಮಂಜುಗೂ ಏನ್ ಸಂಬಂಧ ಗೊತ್ತಾ

ಬಹುಭಾಷಾ ನಟಿ ಕಿಡ್ನ್ಯಾಪ್, ಲೈಂಗಿಕ ಕಿರುಕುಳ ಕೇಸ್: ನಟ ದಿಲೀಪ್ ಕೇಸ್ ನಿಂದ ಖುಲಾಸೆ

ಮುಂದಿನ ಸುದ್ದಿ
Show comments