Select Your Language

Notifications

webdunia
webdunia
webdunia
webdunia

ರಜನೀಕಾಂತ್ ಕೂಲಿ ಸಿನಿಮಾಗೆ ಈ ಬಾಲಿವುಡ್ ಸ್ಟಾರ್ ಕೂಡಾ ಸೇರ್ಪಡೆ

Rajinikanth Coolie
ಚೆನ್ನೈ: ತಲೈವಾ ರಜನೀಕಾಂತ್ ನಾಯಕರಾಗಿರುವ ಕೂಲಿ ಸಿನಿಮಾಗೆ ಬಾಲಿವುಡ್ ನ ಈ ಸ್ಟಾರ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ  ಹರಿದಾಡಿದೆ. ಆ ಸ್ಟಾರ್ ಯಾರು ಎಂದು ನೀವೇ ನೋಡಿ.

ಕೂಲಿ ಸಿನಿಮಾ 171 ನೇ ಸಿನಿಮಾ. ಆಕ್ಷನ್ ಸಿನಿಮಾ ನಿರ್ದೇಶನದಲ್ಲಿ ಪಳಗಿದ ಲೋಕೇಶ್ ಕನಗರಾಜು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ಶ್ರುತಿ ಹಾಸನ್, ಸತ್ಯರಾಜ್ ಜೊತೆಗೆ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಕೂಡಾ ತಾರಾಗಣದಲ್ಲಿದ್ದಾರೆ.

ಇದೀಗ ಬಾಲಿವುಡ್ ನಟ ಅಮೀರ್ ಖಾನ್ ಕೂಡಾ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಚಿತ್ರತಂಡ ಕೂಡಿಕೊಳ್ಳುತ್ತಿರುವ ಸುದ್ದಿ ಸಿಕ್ಕ ಬೆನ್ನಲ್ಲೇ ಈಗ ಅಮೀರ್ ಖಾನ್ ಕೂಡಾ ಭಾಗಿಯಾಗಲಿದ್ದಾರೆ ಎಂಬ ಸುದ್ದಿ  ಬಂದಿದೆ.

1995 ರಲ್ಲಿ ರಜನೀಕಾಂತ್ ಜೊತೆ ಅಮೀರ್ ಖಾನ್ ಆತಂಕ್ ಹಿ ಆತಂಕ್ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ಇದೀಗ ಬರೋಬ್ಬರಿ 30 ವರ್ಷಗಳ ನಂತರ ರಜನೀಕಾಂತ್ ಜೊತೆ ಅಭಿನಯಿಸಲಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ. ಬಾಲಿವುಡ್ ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಅಮೀರ್ ಗೆ ಈಗ ಸೌತ್ ಸಿನಿಮಾದಿಂದ ಅದೃಷ್ಟ ಖುಲಾಯಿಸಬಹುದಾ ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಳ್ಳಾರಿ ಕಾರಾಗೃಹಕ್ಕೆ ಇಂದು ದರ್ಶನ್‌ ಸ್ಥಳಾಂತರ ಸಾಧ್ಯತೆ: ಜೈಲು ಬಳಿ ಅಭಿಮಾನಿಗಳ ದಂಡು