Select Your Language

Notifications

webdunia
webdunia
webdunia
webdunia

ಜನವರಿ 3 ರಿತೇಶ್ ದೇಶ್‌ಮುಖ್‌ಗೆ ಜೀವನ ಬದಲಾದ ದಿನವಂತೆ...!!

ಜನವರಿ 3 ರಿತೇಶ್ ದೇಶ್‌ಮುಖ್‌ಗೆ ಜೀವನ ಬದಲಾದ ದಿನವಂತೆ...!!

ನಾಗಶ್ರೀ ಭಟ್

ಬೆಂಗಳೂರು , ಗುರುವಾರ, 4 ಜನವರಿ 2018 (18:03 IST)
ನಟ ರಿತೇಶ್ ದೇಶ್‌ಮುಖ್‌ ಮತ್ತು ಜೆನೆಲಿಯಾ ಡಿಸೋಜಾ ಅವರ ಜೋಡಿ ಬಾಲಿವುಡ್‌ನ ಜನಪ್ರಿಯ ಜೋಡಿಗಳಲ್ಲಿ ಒಂದು. ಸುಮಾರು 10 ವರ್ಷಗಳವರೆಗೆ ಪ್ರೇಮಿಸಿ ಮದುವೆಯಾಗಿರುವ ಇವರಿಗೆ ಈಗ ಮುದ್ದಾದ ಮಗುವೂ ಇದೆ. ಹೀಗಿರುವಾಗ ರಿತೇಶ್ ಜೆನಿಲಿಯಾ ತಮಗೆ ದೊರೆತಿರುವ ಕುರಿತು ಟ್ವೀಟ್ ಒಂದನ್ನು ಮಾಡಿದ್ದಾರೆ.

ಅದರಲ್ಲಿ "ಜನವರಿ 3, 2003: 15 ವರ್ಷಗಳ ಹಿಂದೆ 'ತುಜೆ ಮೇರಿ ಕಸಮ್' ಬಿಡುಗಡೆಯಾಯಿತು. ಮೊದಲ ಚಿತ್ರ: ಜೀವನವನ್ನು ಬದಲಾಯಿಸಿತು. ಆರ್ಕಿಟೆಕ್ಟ್ ಒಬ್ಬ ನಟನಾದ. ಸಹನಟಿ ಜೆನಿಲಿಯಾ ನನ್ನ ಬೈಕೊ(ಹೆಂಡತಿ) ಆದರು." ಎಂದು ಬರೆದುಕೊಂಡಿದ್ದಾರೆ. ಈ ಮೂಲಕ 15 ವರ್ಷಗಳ ಹಿಂದೆ ಪ್ರಾರಂಭವಾದ ತಮ್ಮ ವೃತ್ತಿ ಬದುಕು ಮತ್ತು ವಯಕ್ತಿಕ ಬದುಕಿನ ಸಮಯವನ್ನು ನೆನಪಿಸಿಕೊಂಡಿದ್ದಾರೆ.
 
ಈ ಟ್ವೀಟ್ ಅನ್ನು ಮುಂದುವರಿಸುತ್ತಾ ಚಿತ್ರದ ಡೈರೆಕ್ಟರ್ ವಿಜಯ ಭಾಸ್ಕರ್ ಅವರಿಗೆ "ಪ್ರಾಮಾಣಿಕ ಧನ್ಯವಾದಗಳು" ಎಂದು ಹೇಳುತ್ತಾ  ನಿರ್ಮಾಪಕ 'ರಾಮೋಜಿ ರಾವ್' ಮತ್ತು ತಮ್ಮನ್ನು ಶಿಫಾರಸು ಮಾಡಿದ ಸಿನಿಮಾಟೋಗ್ರಾಫರ್ 'ಕಬೀರ್ ಲಾಲ್' ಅವರಿಗೆ ಐ ಲವ್ ಯೂ ಎಂದು ಹೇಳಿದ್ದಾರೆ.

ಇದರೊಂದಿಗೆ ಚಿತ್ರದ ಸೆಟ್‌ನ ಒಂದು ಚಿಕ್ಕ ಕಥೆಯನ್ನು ಹಂಚಿಕೊಳ್ಳುತ್ತಾ "ಚಿತ್ರದ ಚಿತ್ರೀಕರಣದ ಸಮಯದಲ್ಲಿ ಮೊದಲ ಎರಡು ದಿನಗಳಲ್ಲಿ ಜೆನೆಲಿಯಾ ನನ್ನೊಂದಿಗೆ ಮಾತನಾಡಲಿಲ್ಲ, ಏಕೆಂದರೆ ಆಗ ನನ್ನ ತಂದೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಮೊದಲ ಬಾರಿ ಜೆನಿಲಿಯಾ ನನ್ನನ್ನು ಕೇಳಿದ್ದು 'ನಿಮ್ಮ ಸೆಕ್ಯುರಿಟಿ ಎಲ್ಲಿ?' ಎಂದು. 'ನಾನು ಯಾರನ್ನೂ ಹೊಂದಿಲ್ಲ' ಎಂಬುದಾಗಿ ಉತ್ತರಿಸಿದ್ದೆ" ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿ ಕೊಂಡು ಹಂಚಿಕೊಂಡರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಂತು ನೋಡಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಯ ಶಾಕಿಂಗ್ ಸುದ್ದಿ