Select Your Language

Notifications

webdunia
webdunia
webdunia
Tuesday, 4 March 2025
webdunia

ಬಾಲಿವುಡ್‌ನಲ್ಲಿ ಎಮಿ ಜಾಕ್ಸನ್‌ಗೆ ಭರ್ಜರಿ ಚಾನ್ಸ್

ಬಾಲಿವುಡ್‌ನಲ್ಲಿ ಎಮಿ ಜಾಕ್ಸನ್‌ಗೆ ಭರ್ಜರಿ ಚಾನ್ಸ್
Mumbai , ಸೋಮವಾರ, 20 ಫೆಬ್ರವರಿ 2017 (09:10 IST)
ಸಾಮಾನ್ಯವಾಗಿ ಬಾಲಿವುಡ್‌ ಖಾನ್‌ತ್ರಯರ ಜತೆ ಅಭಿನಯಿಸಲು ತಾ ಮುಂದು ನಾ ಮುಂದು ಎಂದು ನಟಿಮಣಿಯರು ಹಾತೊರೆಯುತ್ತಾರೆ. ಆ ಚಾನ್ಸ್ ಎಲ್ಲರಿಗೂ ಸಿಗಲ್ಲ. ಅದರಲ್ಲೂ ದಬಾಂಗ್ ಬಾಯ್ ಸಲ್ಮಾನ್ ಖಾನ್ ಜತೆಗಂತೂ ಸಾಧ್ಯವೇ ಇಲ್ಲ ಬಿಡಿ ಎಂಬಂತಹ ಪರಿಸ್ಥಿತಿ ಇದೆ. 
 
ಇದೀಗ ಸಲ್ಮಾನ್ ಖಾನ್ ಜತೆ ಅಭಿನಯಿಸುವ ಚಾನ್ಸ್ ಗಿಟ್ಟಿಸಿದ್ದಾರೆ ಎಮಿ ಜಾಕ್ಸನ್. 2018ರಲ್ಲಿ ದಬಾಂಗ್ 3 ಮಾಡುವುದಾಗಿ ಸಲ್ಲು ಸಹೋದರ ಅರ್ಬಾಜ್ ಖಾನ್ ಹೇಳಿದ್ದರು. ಇದೀಗ ಆ ಚಿತ್ರಕ್ಕೆ ನಾಯಕಿಯಾಗಿ ಎಮಿ ಜಾಕ್ಸನ್ ಆಯ್ಕೆ ಬಹುತೇಕ ಫೈನಲ್ ಆಗಿದೆಯಂತೆ.
 
ಇದಕ್ಕೂ ಮುನ್ನ ಸೋನಾಕ್ಷಿ ಸಿನ್ಹಾ ನಾಯಕಿ ಎನ್ನಲಾಗಿತ್ತು. ಇದೀಗ ಆ ಪಾತ್ರ ಎಮಿ ಪಾಲಾಗಿದೆ. ಸಲ್ಲು ಜತೆ ಎಮಿ ಸುತ್ತಾಡುತ್ತಿರುವುದು ಇದಕ್ಕೆ ಇಂಬು ಕೊಟ್ಟಿದೆ. ಇತ್ತೀಚೆಗೆ ಸಲ್ಮಾನ್ ಖಾನ್ ಪರ್ಸನಲ್ ಬೈಕನ್ನು ಎಮಿ ಜಾಕ್ಸನ್ ಬಳಸುತ್ತಿರುವುದು ಹೊಸ ದಬಾಂಗ್ ಗರ್ಲ್ ಈಕೆ ಎಂಬುದಕ್ಕೆ ಇನ್ನಷ್ಟು ಸಾಕ್ಷ್ಯ ಒದಗಿಸಿದೆ.   
 
ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸಲ್ಮಾನ್ ಖಾನ್ ಜತೆಗಿನ ಸಿನಿಮಾದಲ್ಲಿ ಮಾಡುತ್ತಿರುವುದಾಗಿ ತಿಳಿಸಿದ್ದರು. ಸದ್ಯಕ್ಕೆ ರಜನಿಕಾಂತ್ ಜತೆಗಿನ 2.0 ಚಿತ್ರದಲ್ಲಿ ನಾಯಕಿಯಾಗಿ ಎಮಿ ಜಾಕ್ಸನ್ ಅಭಿನಯಿಸುತ್ತಿದ್ದಾರೆ. ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾ ಇದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಗೀತ ನಿರ್ದೇಶಕಿಯಾಗಿ ಅಮೀರ್ ಖಾನ್ ಮಗಳು