Select Your Language

Notifications

webdunia
webdunia
webdunia
webdunia

ಜಾಹ್ನವಿ ಕಪೂರ್ ಈ ಕ್ಯಾರೆಕ್ಟರ್ ನಟ ಇಶಾನ್ ಕಟ್ಟರ್ ಗೆ ತುಂಬಾ ಇರಿಟೇಟ್ ಮಾಡುತ್ತದೆಯಂತೆ!

ಜಾಹ್ನವಿ ಕಪೂರ್ ಈ ಕ್ಯಾರೆಕ್ಟರ್ ನಟ ಇಶಾನ್ ಕಟ್ಟರ್ ಗೆ ತುಂಬಾ ಇರಿಟೇಟ್ ಮಾಡುತ್ತದೆಯಂತೆ!
ಮುಂಬೈ , ಶುಕ್ರವಾರ, 29 ಜೂನ್ 2018 (06:32 IST)
ಮುಂಬೈ : ಮರಾಠಿಯ ಸೂಪರ್ ಹಿಟ್ ಚಿತ್ರದ ರಿಮೇಕ್ ಧಡಕ್ ಚಿತ್ರ ದಲ್ಲಿ ಜಾಹ್ನವಿ ಕಪೂರ್ ಹಾಗೂ ಇಶಾನ್ ಕಟ್ಟರ್ ಜೋಡಿಯಾಗಿ ನಟಿಸಿದ್ದು, ತೆರೆಯ ಮೇಲೆ ಇವರ ಜೋಡಿ ಎಲ್ಲರಿಗೂ ಇಷ್ಟವಾಗಿದೆ. ಈ ನಡುವೆ ಇಶಾಂತ್ ಕಟ್ಟರ್ ಅವರು ಜಾಹ್ನವಿ ಕಪೂರ್ ಕುರಿತಾದ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ.


ಧಡಕ್ ಚಿತ್ರದ ಟ್ರೈಲರ್ ಈಗಾಗಲೇ ರಿಲೀಸ್ ಆಗಿ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಹಾಗೇ ಈ ಚಿತ್ರ ಜುಲೈ 20ರಂದು ದೇಶಾದದ್ಯಂತ ತೆರೆಗೆ ಬರಲು ರೆಡಿಯಾಗಿದೆ. ಸದ್ಯಕ್ಕೆ ಚಿತ್ರತಂಡ ಪ್ರಮೋಷನ್ ಕಾರ್ಯದಲ್ಲಿ ತೊಡಗಿದ್ದಾರೆ. ಈ ವೇಳೆ ಇಶಾಂತ್ ಕಟ್ಟರ್ ಜಾಹ್ನವಿ ಕಪೂರ್ ಅವರ ಬಗ್ಗೆ ಮಾತನಾಡುತ್ತಾ,’ ಜಾಹ್ನವಿ ಇಷ್ಟು ದೊಡ್ಡವಳಾದರೂ ಚಿಕ್ಕಮಗುವಿನಂತೆ. ಆಕೆ ಕೇಳಿದ್ದನ್ನೆ ಕೇಳಿ ನನಗೆ ಕೋಪ ಬರಿಸುತ್ತಾಳೆ. ಯಾವುದಾದರೂ ಒಂದು ವಿಚಾರವನ್ನು ಆಕೆ ಕೇಳಿದರೆ, ಅದನ್ನು ಕೇಳುತ್ತಲೇ ಇರುತ್ತಾಳೆ. ಇದು ನಿಜಕ್ಕೂ ನನಗೆ ಒಂದೊಂದು ಸಲ ಬೇಸರ ತರಿಸುತ್ತದೆ ಎಂದು ನಗುತ್ತಲೇ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಸಮಂತಾ ಮಾದ್ಯಮದವರ ಮೇಲೆ ಕೋಪಿಸಿಕೊಂಡಿದ್ಯಾಕೆ?