Publish Date: Mon, 27 Nov 2017 (11:52 IST)
Updated Date: Mon, 27 Nov 2017 (11:54 IST)
ಮುಂಬೈ: ಸ್ಕ್ರಿಪ್ಟ್ ನೋಡುತ್ತಾ ಕೂತಿದ್ದಾಗ ಹಿಂದಿನಿಂದ ಮೈ ಮೇಲೆ ಹಾವು ತಂದು ಬಿಟ್ಟು ತಮಾಷೆ ನೋಡಿದ ಸಹನಟನ ಮೇಲೆ ಹಾಟ್ ತಾರೆ ಸನ್ನಿ ಲಿಯೋನ್ ಸೇಡು ತೀರಿಸಿಕೊಂಡಿದ್ದಾರೆ. ಹೇಗೆ ಅಂತೀರಾ?
ಸಹ ನಟ ಸನ್ನಿ ರಾಜಾನಿ, ಸನ್ನಿ ಲಿಯೋನ್ ಮೇಲೆ ಹಾವು ಬಿಟ್ಟು ಬೇಸ್ತು ಬೀಳಿಸಿದ್ದ. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಸನ್ನಿ ಸಹ ನಟನ ಮೇಲೆ ತನ್ನದೇ ಶೈಲಿಯಲ್ಲಿ ಸೇಡು ತೀರಿಸಿಕೊಂಡಿದ್ದಾಳೆ. ಹಾಗೆಯೇ ಆ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಹಾಕಿದ್ದಾಳೆ.
ಆ ವಿಡಿಯೋದಲ್ಲಿ ಸನ್ನಿ, ರಾಜಾನಿ ಮೇಲೆ ಎರಡು ಕೈಯಲ್ಲೂ ಚಾಕಲೇಟ್ ಕೇಕ್ ತಂದು ಹಿಂದಿನಿಂದ ಗೊತ್ತೇ ಆಗದಂತೆ ಬಂದು ಮುಖದ ತುಂಬಾ ಕೇಕ್ ಮೆತ್ತುತ್ತಾಳೆ. ಬೇಸ್ತು ಬೀಳುವ ರಾಜಾನಿ ಸನ್ನಿಯನ್ನು ಸೆಟ್ ತುಂಬಾ ಅಟ್ಟಾಡಿಸುತ್ತಾನೆ. ಈ ವಿಡಿಯೋ ಕೂಡಾ ಈಗ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ