Webdunia - Bharat's app for daily news and videos

Install App

ಬಿಗ್ ಬಾಸ್ ಶೋ ನಿರೂಪಣೆಗೆ ನಟ ಸಲ್ಮಾನ್ ಖಾನ್ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

Webdunia
ಭಾನುವಾರ, 16 ಸೆಪ್ಟಂಬರ್ 2018 (06:40 IST)
ಮುಂಬೈ : ಇಲ್ಲಿಯ ತನಕ ಹಿಂದಿ ಬಿಗ್ ಬಾಸ್ ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ನಿರೂಪಣೆ ಮಾಡಿಕೊಂಡ ಬಂದ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಬಾರಿ ಬಿಗ್ ಬಾಸ್‌ 12 ನ ಆವೃತ್ತಿಯಲ್ಲಿ ಅವರ  ಸಂಭಾವನೆ ಹೆಚ್ಚಾಗಿದೆಯಂತೆ.


ಹಿಂದಿಯ ಬಿಗ್ ಬಾಸ್ ನ 12 ನೇ ಆವೃತ್ತಿ ಸೆಪ್ಟೆಂಬರ್ 16 ರಂದು ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಗ್ ಬಾಸ್ ಪೋಸ್ಟರ್ ಗಳು, ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವರದಿಗಳ ಪ್ರಕಾರ ಈ ಬಾರಿ ಬಿಗ್ ಬಾಸ್‌ ನಿರೂಪಣೆ ಮಾಡಲು ಸಲ್ಮಾನ್ ಖಾನ್ ಹೆಚ್ಚಿನ ಸಂಭಾವನೆ ಪಡೆದಿದ್ದಾರಂತೆ.


ಬಿಗ್ ಬಾಸ್ ನಲ್ಲಿ ಒಟ್ಟು 13 ವಾರಗಳ ಕಾಲ ಈ ಬಿಗ್ ಬಾಸ್ ಶೋ ನಡೆಯಲಿದ್ದು, ಅದರಲ್ಲಿ ಶನಿವಾರ ಹಾಗೂ ಭಾನುವಾರ ಅಷ್ಟೆ ಸಲ್ಮಾನ್ ಕಾಣಿಸಲಿದ್ದಾರೆ. ಅಂದರೆ ಒಟ್ಟು 26 ಸಂಚಿಕೆಗಳು ಸಲ್ಮಾನ್ ನಿರೂಪಣೆಯಲ್ಲಿ ನಡೆಯಲಿವೆ. ಅವರು ಒಂದು ಸಂಚಿಕೆಗೆ ಸುಮಾರು 14 ಕೋಟಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.


ಸೀಸನ್ 11 ರಲ್ಲಿ ಸಲ್ಮಾನ್ ಒಂದು ಸಂಚಿಕೆಗೆ 12 ಕೋಟಿ ಪಡೆದಿದ್ದರು ಇದೀಗ 2 ಕೋಟಿ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಸೀಜನ್ ನಾಲ್ಕರಿಂದ ಆರರವರೆಗೆ ಎರಡೂವರೆ ಕೋಟಿ ಮಾತ್ರ ತೆಗೆದುಕೊಂಡಿದ್ದರು. ಇನ್ನು ಸೀಸನ್ 8 ರಲ್ಲಿ ಮತ್ತೆ ಸಂಭಾವನೆ ಹೆಚ್ಚಿಸಿಕೊಂಡಿದ್ದರು. ಆವೃತ್ತಿ 9ಕ್ಕೆ 7 ಕೋಟಿ, ಆವೃತ್ತಿ 10ಕ್ಕೆ 8 ಕೋಟಿ, ಆವೃತ್ತಿ 10ಕ್ಕೆ 11 ಕೋಟಿ ಪಡೆದಿದ್ದರು ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಾರುಖ್‌ ಖಾನ್ ಪತ್ನಿ ಗೌರಿ ಒಡೆತನದ ರೆಸ್ಟೋರೆಂಟ್‌ನಲ್ಲಿ ನಕಲಿ ಪನ್ನೀರ್‌ ಬಳಕೆ, ಯೂಟ್ಯೂಬರ್‌ ಹೇಳಿದ್ದೇನು

Vincy Aloshious: ಡ್ರಗ್ಸ್ ಸೇವಿಸಿ ಅಸಭ್ಯವಾಗಿ ವರ್ತಿಸಿದ ನಟ ಶೈನ್ ಟಾಮ್ ವಿರುದ್ಧ ದೂರು ಕೊಟ್ಟ ವಿನ್ಸಿ ಅಲೋಶಿಯಸ್

Thalapathy Vijay: ಸಿನಿಮಾಗಳಲ್ಲಿ ನಮ್ಮನ್ನು ಭಯೋತ್ಪಾದಕರಂತೆ ತೋರಿಸ್ತೀರಿ: ದಳಪತಿ ವಿಜಯ್ ವಿರುದ್ಧ ಸಿಡಿದೆದ್ದ ಮುಸ್ಲಿಮರು

Kiccha Sudeep:ಬಿಲ್ಲ ರಂಗ ಬಾಷಾ ಸಿನಿಮಾ ಚಿತ್ರೀಕರಣ ಶುರು ಮಾಡಿದ ಸುದೀಪ್: ಇದೊಂದು ವಿಚಾರ ಆಮೇಲೆ ಹೇಳ್ತೀನಿ ಎಂದ ಕಿಚ್ಚ

ಹೆಣ್ಣು ಮಗುವಾಗುತ್ತಿದ್ದ ಹಾಗೇ ಆಥಿಯಾಗೆ ಬಿಗ್ ಸರ್ಪ್ರೈಸ್ ಕೊಟ್ಟ ಕೆಎಲ್ ರಾಹುಲ್‌, ಸುನೀಲ್ ಶೆಟ್ಟಿ

ಮುಂದಿನ ಸುದ್ದಿ
Show comments