Select Your Language

Notifications

webdunia
webdunia
webdunia
webdunia

`ಪದ್ಮಾವತಿ’ ದೀಪಿಕಾ ಧರಿಸಿರುವ ಲೆಹಂಗಾ ತೂಕ ಕೇಳಿದ್ರೆ ಶಾಕ್ ಆಗ್ತೀರಿ…!

Deepika Padukone
ಮುಂಬೈ , ಶನಿವಾರ, 14 ಅಕ್ಟೋಬರ್ 2017 (19:44 IST)
ಮುಂಬೈ: ಮೀರಾತ್ ರಾಣಿ ಪದ್ಮಿನಿಯಾಗಿ ಅಭಿನಯಿಸಿರುವ `ಪದ್ಮಾವತಿ’ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಧರಿಸಿರುವ ಲೆಹೆಂಗಾ ತೂಕ ಕೇಳಿದರೆ ನೀವು ನಿಜವಾಗಿಯೂ ಶಾಕ್ ಆಗ್ತೀರಿ.

ಐತಿಹಾಸಿಕ ಕಥೆ ಹೊಂದಿರುವ ಪದ್ಮಾವತಿ ಪಾತ್ರಕ್ಕೆ ದೀಪಿಕಾ ಪಡುಕೋಣೆ ಬರೋಬ್ಬರಿ 30 ಕೆ.ಜಿ ತೂಕದ ಲೆಹಂಗಾ ಧರಿಸಿದ್ದಾರೆ. ಪದ್ಮಾವತಿ ಪಾತ್ರಕ್ಕೆ ತಕ್ಕ ಹಾಗೆ ವಸ್ತ್ರ ಮತ್ತು ಆಭರಣಗಳ ವಿನ್ಯಾಸ ಮಾಡಲಾಗಿದೆ. ಈ ವಿಶೇಷ ಲೆಹಂಗಾದಲ್ಲಿ ಜರತಾರಿ ರೇಷ್ಮೆ ಬಟ್ಟೆಯಲ್ಲಿ ಕಸೂತಿ ಮಾಡಲಾಗಿದ್ದು, ಲೆಹೆಂಗಾ ಮಾತ್ರ 26 ಕೆಜಿ ತೂಕವಿದೆ. ಅದರ ದುಪಟ್ಟ 4 ಕೆಜಿ ಇದೆ.
webdunia

ದೀಪಿಕಾ ಧರಿಸಿರುವ ಲೆಹೆಂಗಾವನ್ನು ಡಿಸೈನರ್ ರಿಮ್ಮಲ್ ತಯಾರಿಸಿದ್ದು, ಮುತ್ತು, ರತ್ನ ಹಾಗೂ ಹವಳದಿಂದ ಕಸೂತಿ ಮಾಡಲಾಗಿದೆ. ರಾಜಸ್ಥಾನಿ ಆಭರಣಗಳನ್ನು ಅಲಂಕರಿಸಿ ಸಂಪೂರ್ಣ ರಜಪೂತ ಯುಗದ ಸೌಂದರ್ಯವನ್ನು ಮರಳಿ ತಂದಿರುವಂತೆ ವಿನ್ಯಾಸಗೊಳಿಸಲಾಗಿದೆ. ದೀಪಿಕಾ ಧರಿಸಿರುವ ಆಭರಣವನ್ನು 200 ಮಂದಿ ತಯಾರಿಸಿದ್ದು, 600 ದಿನ ತೆಗೆದುಕೊಂಡು ಸಿದ್ಧ ಪಡಿಸಿದ್ದಾರಂತೆ.

ಅಂದಹಾಗೆ ದಿಪೀಕಾ ಈ ಹಿಂದೆ ರಾಮ್‍ಲೀಲಾ ಚಿತ್ರದಲ್ಲಿ ಸುಮಾರು 30 ಕೆಜಿ ಮತ್ತು ಬಾಜಿರಾವ್ ಮಸ್ತಾನಿ ಸಿನಿಮಾದಲ್ಲೂ 20 ಕೆಜಿ ತೂಕದ ಉಡುಪು ಧರಿಸಿದ್ದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೇವದಾಸ್ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ಸಹ 30 ಕೆಜಿ ತೂಕದ ಉಡುಪು ಧರಿಸಿದ್ದರು. ಅನುಷ್ಕಾ ಶರ್ಮಾ `ಏ ದಿಲ್ ಹೈ ಮುಷ್ಕಿಲ್’ ಸಿನಿಮಾದ ಹಾಡೊಂದರಲ್ಲಿ 20 ಕೆ.ಜಿ ತೂಕದ ಲೆಹೆಂಗಾವನ್ನು ಧರಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ತಮ್ಮ ಗೆಳತಿಯನ್ನ ಹೇಗೆ ಕರೀತಾರೆ ಗೊತ್ತಾ…?