Publish Date: Wed, 18 Jul 2018 (13:02 IST)
Updated Date: Wed, 18 Jul 2018 (13:04 IST)
ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಇರಲಿ ಹಾಲಿವುಡ್ ಇರಲಿ ಯಾವುದಕ್ಕೂ ಸೈ ಎನ್ನುವ ನಟಿಯರಲ್ಲಿ ಪ್ರಿಯಾಂಕಾ ವಿಭಿನ್ನ ಮನೋಭಾವದವರು ಇಂದು (ಜುಲೈ 18) ತಮ್ಮ 36 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.
ಕ್ವಾಂಟಿಕೊ ನಟಿ ಈ ವರ್ಷ ತನ್ನ ಹುಟ್ಟುಹಬ್ಬವನ್ನು ಮನೆಯಿಂದ ದೂರ ಕುಟುಂಬದವರೊಂದಿಗೆ ಮತ್ತು ತಮ್ಮ ರೂಮರ್ಡ್ ಬಾಯ್‌ಫ್ರೆಂಡ್ ನಿಕ್ ಜೊನಸ್ ಅವರೊಂದಿಗೆ ಲಂಡನ್‌ನಲ್ಲಿ ಆಚರಿಸುತ್ತಿದ್ದಾರೆ. ಪ್ರಿಯಾಂಕಾ "ಜನ್ಮದಿನದ ಶುಭಾಶಯ ಪ್ರಿಯಾಂಕಾ" ಎಂದು ಬರೆದಿರುವ ಪ್ಲೇಟ್ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಸದ್ಯ ಹಾಲಿವುಡ್ ಚಿತ್ರವೊಂದರಲ್ಲಿ ಅಭಿನಯಿಸುತ್ತಿರುವ ಪ್ರಿಯಾಂಕಾ "ಇಸಂಟ್ ಇಟ್ ರೊಮ್ಯಾಂಟಿಕ್" ಚಿತ್ರದ ಭಾಗವಾಗಿ ನ್ಯೂಯಾರ್ಕ್ ಬೀದಿಗಳಲ್ಲಿ ಸಹ ಕಲಾವಿದರೊಂದಿಗೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಸಂಟ್ ಇಟ್ ರೊಮ್ಯಾಂಟಿಕ್ ಚಿತ್ರ ಹಾಸ್ಯ ಚಿತ್ರವಾಗಿದ್ದು ಈ ಚಿತ್ರದಲ್ಲಿ ರೆಬೆಲ್ ವಿಲ್ಸನ್, ಆಡಮ್ ಡೀವೈನ್, ಲಿಯಮ್ ಹಮ್ಸ್ ವರ್ತ್ ಚಿತ್ರದಲ್ಲಿ ನಟಿಸಿದ್ದಾರೆ.