Publish Date: Sun, 31 Dec 2017 (07:31 IST)
Updated Date: Sun, 31 Dec 2017 (07:37 IST)
ಮುಂಬೈ: ಮಾಹಿತಿ ತಂತ್ರಜ್ಞಾನದಲ್ಲಿ ಗೂಗಲ್ ಒಂದು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಹೆಚ್ಚಿನವರಿಗೆ ಗೂಗಲ್ ಬಗ್ಗೆ ಅರಿವು ಇದ್ದೆ ಇರುತ್ತೆ. ಏಕೆಂದರೆ ಮಾಹಿತಿ ತಂತ್ರಜ್ಙಾನಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಎಲ್ಲರೂ ಬಳಸುವುದು ಗೂಗಲ್ ಅನ್ನೆ. ಇದರ ಸಿಇಓ ಕೂಡ ಭಾರತೀಯರೆಂಬ ಸಂಗತಿ ಎಲ್ಲರಿಗೂ ತಿಳಿದಿದೆ.
ಗೂಗಲ್ ಸಿಇಓ ಆಗಿರುವ ಸುಂದರ್ ಪಿಚೈ ಅವರು ಗೂಗಲ್ ಅಷ್ಟೊಂದು ಜನಪ್ರಿಯವಾಗಲು ಕಾರಣ ಬಾಲಿವುಡ್ ನ ಬಾದ್ ಶಾ ಶಾರೂಕ್ ಖಾನ್ ಎಂಬ ವಿಷಯವನ್ನು ಹೇಳಿದ್ದಾರೆ. ಅವರು ಗೂಗಲ್ ನ ಸಿಇಓ ಆಗಿದ್ದಾಗ 2014ರಲ್ಲಿ ಶಾರೂಕ್ ಖಾನ್ ಅವರ ‘ಹ್ಯಾಪಿ ನ್ಯೂ ಇಯರ್’ ಚಿತ್ರದ ಸಮಯದಲ್ಲಿ ನಡೆಸಿದ ಕಾರ್ಯಕ್ರಮದ ನಂತರವೇ ಗೂಗಲ್ ಜನಪ್ರಿಯತೆ ಹೆಚ್ಚಾಗಿದ್ದು ಎಂದು ಅವರು ಸ್ಟಾರ್ ಪ್ಲಸ್ ನಲ್ಲಿ ಪ್ರಸಾರವಾಗಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ ಬಾಲಿವುಡ್ ಚಿತ್ರರಂಗ ಭಾರತವೊಂದೇ ಅಲ್ಲದೆ ವಿಶ್ವಮಟ್ಟದಲ್ಲೂ ಗುರುತಿಸಿಕೊಂಡಿರುವುದಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ