ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಾಯಿ ವೃಂದಾ ರೈ ವಾಸವಿರುವ ಬಾಂದ್ರಾದ ಲಾ ಮೆರ್ ಅಪಾರ್ಟ್ ಮೆಂಟ್ ನ 13 ನೇ ಮಹಡಿಗೆ ಬೆಂಕಿ ತಗುಲಿದೆ.
ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಐಶ್ವರ್ಯಾ ಪತಿ ಅಭಿಷೇಕ್ ಜತೆ ತಾಯಿ ಮನೆಗೆ ದೌಡಾಯಿಸಿದ್ದು, ಪರಿಸ್ಥಿತಿ ಅವಲೋಕಿಸಿದರು.
ಅದೃಷ್ಟವಶಾತ್ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎನ್ನಲಾಗಿದೆ. ಇದು 16 ಮಹಡಿಗಳುಳ್ಳ ಅಪಾರ್ಟ್ ಮೆಂಟ್ ಆಗಿದ್ದು, ಮದುವೆಗಿಂತ ಮೊದಲು ಐಶ್ವರ್ಯಾ ಇದೇ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ