Select Your Language

Notifications

webdunia
webdunia
webdunia
webdunia

ಸಿಲ್ವರ್ ಸ್ಕ್ರೀನ್ ನಲ್ಲಿ ಮತ್ತೆ ಒಂದಾಗ್ತಾರ ಐಶ್-ಅಭಿ

ಸಿಲ್ವರ್ ಸ್ಕ್ರೀನ್ ನಲ್ಲಿ ಮತ್ತೆ ಒಂದಾಗ್ತಾರ ಐಶ್-ಅಭಿ
ಮುಂಬೈ , ಬುಧವಾರ, 27 ಸೆಪ್ಟಂಬರ್ 2017 (21:34 IST)
ಮುಂಬೈ: `ಗುರು’ ಚಿತ್ರದ ಶೂಟಿಂಗ್ ವೇಳೆ ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ಪ್ರೀತಿಯಲ್ಲಿ ಬಿದ್ದು, ದಾಂಪತ್ಯ ಜೀವನಕ್ಕೂ ಕಾಲಿಟ್ಟರು. ಆದರೆ ಮದುವೆ ನಂತರ ಐಶ್ ಅಭಿ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ.

ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಮದುವೆಯಾದ ಬಳಿಕ ಹಲವು ಬಿಗ್ ಡೈರೆಕ್ಟರ್ ಗಳ ಸಿನಿಮಾಗಳಿಗೆ ಆಫರ್ ಬಂದರೂ ಸಹ ಇಬ್ಬರು ಒಟ್ಟಿಗೆ ನಟಿಸೋಕೆ ಸಮ್ಮತಿ ನೀಡಿರಲಿಲ್ಲ. ಆದರೆ ಈಗ ವಾಸು ಭಗ್ನಾನಿ `ಸುಂದರಕಾಂಡ್’ ಸಿನಿಮಾ ಮಾಡ್ತಿದ್ದಾರೆ. ಈ ಹಿಂದೆಯೂ ಐಶ್ ಅಭಿ ದಂಪತಿಗೆ ತಮ್ಮ  ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದ ಭಗ್ನಾನಿ ಈಗ ಈ ಸಿನಿಮಾದಲ್ಲಿ ನಟಿಸುವಂತೆ ಅಪ್ರೋಚ್ ಮಾಡಿದ್ದಾರಂತೆ.

ಆದರೆ ಬಾಲಿವುಡ್ ದಿವಾ ಐಶ್ವರ್ಯ ಮತ್ತು ಅಭೀಷೇಕ್ ಬಚ್ಚನ್ ಈ ಚಿತ್ರದಲ್ಲಿ ಬೆಳ್ಳೆ ತೆರೆ ಮೇಲೆ ಕಾಣಿಸಿಕೊಳ್ತಾರ ಗೊತ್ತಿಲ್ಲ. ಅಥವಾ ಈ ಚಿತ್ರವನ್ನು ನಿರಾಕರಿಸುತ್ತಾರ ಎಂದು ಕಾದುನೋಡಬೇಕು.
ಈ ಚಿತ್ರಕ್ಕೆ ಇರ್ಫಾನ್ ಮತ್ತು ತಾಪ್ಸಿ ಪನ್ನು ಜತೆ ಮಾತುಕತೆಯಾಗಿತ್ತು. ಆದರೆ ಅವರಿಬ್ಬರೂ ಈ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ದಂಪತಿ ಸಿನಿಮಾದ ಸ್ಕ್ರಿಪ್ಟ್ ಕೇಳಿದ್ದಾರಂತೆ. ಆದರೆ ಒಟ್ಟಿಗೆ ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತಾರೆ ಕಾದು ನೋಡಬೇಕು.

ಐಶ್ವರ್ಯ ಮತ್ತು ಅಭಿಷೇಕ್ ಕೊನೆಯದಾಗಿ ಮಣಿರತ್ನಂ ನಿರ್ದೇಶನದ ರಾವಣ್ ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಯಾವುದೇ ಚಿತ್ರದಲ್ಲೂ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿರಲಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಮೊದಲ ಸಂಭಾವನೆ ಎಷ್ಟು ಗೊತ್ತಾ?