ಕೊನೆಗೂ ರಿಷಿ ಕಪೂರ್ ಕೊನೆಯಾಸೆ ನೆರವೇರಲೇ ಇಲ್ಲ!

ಶುಕ್ರವಾರ, 1 ಮೇ 2020 (09:46 IST)
ಮುಂಬೈ: ನಿನ್ನೆಯಷ್ಟೇ ನಮ್ಮನ್ನಗಲಿದ ಬಾಲಿವುಡ್ ನ ಹಿರಿಯ ನಟ ರಿಷಿ ಕಪೂರ್ ಗೆ ಜೀವನದಲ್ಲಿ ಒಂದೇ ಒಂದು ಆಸೆಯಿತ್ತು. ಆದರೆ ಅದು ನೆರವೇರದೇ ಅವರು ಇಹಲೋಕದ ಯಾತ್ರೆ ಮುಗಿಸಿದ್ದಾರೆ.

 
ಪುತ್ರ, ನಟ ರಣಬೀರ್ ಕಪೂರ್ ಎಂದರೆ ರಿಷಿಗೆ ಅಚ್ಚುಮೆಚ್ಚು. ಮಗನ ಪ್ರತಿ ಹೆಜ್ಜೆಯಲ್ಲೂ ಜತೆಗಿದ್ದ ರಿಷಿ ಕಪೂರ್ ಗೆ ಕೊನೆಗಾಲದಲ್ಲಾದರೂ ಅವನ ಮದುವೆ ನೋಡಬೇಕೆಂಬ ಆಸೆಯಿತ್ತು.

ಹಲವು ಬಾರಿ ರಿಷಿ ಸಂದರ್ಶನಗಳಲ್ಲಿ ಇದನ್ನು ಹೇಳಿಕೊಂಡಿದ್ದರು ಕೂಡಾ. ಆದರೆ ರಣಬೀರ್ ಗೆ ಅಪ್ಪನ ಆಸೆ ಈಡೇರಿಸಲಾಗಲೇ ಇಲ್ಲ. ಅಲಿಯಾ ಭಟ್ ಜತೆ ರಿಲೇಷನ್ ಶಿಪ್ ನಲ್ಲಿರುವ ರಣಬೀರ್ ಸದ್ಯದಲ್ಲೇ ಮದುವೆಯಾಗಬಹುದು ಎಂದು ಆಗಾಗ ರೂಮರ್ಸ್ ಬರುತ್ತಲೇ ಇತ್ತು. ಆದರೆ ಅದು ನೆರವೇರಲೇ ಇಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಾಹಸಸಿಂಹ ವಿಷ್ಣುವರ್ಧನ್ ಜತೆ ಹೋಲಿಕೆ ಮಾಡಲು ಹೊರಟವರಿಗೆ ಕತ್ತರಿ ಹಾಕಿದ ಕಿಚ್ಚ ಸುದೀಪ್