Publish Date: Thu, 29 Mar 2018 (05:57 IST)
Updated Date: Thu, 29 Mar 2018 (06:00 IST)
ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಿನಿಮಾ ತಾರೆಯರೇ ಸಕ್ರಿಯವಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಬಾಲಿವುಡ್ ನಟ ಫರಾನ್ ಅಖ್ತರ್ ಅವರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲೊಂದಾದ ತಮ್ಮ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ.
ಈ ಬಗ್ಗೆ ಅವರು ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದು, ಫೇಸ್ಬುಕ್ ವೈಯಕ್ತಿಕ ಅಕೌಂಟ್ ರದ್ದು ಮಾಡ್ತಿದ್ದೇನೆ. ಅದಕ್ಕೆ ಎಂದೂ ವಾಪಸ್ ಆಗಲ್ಲ. ಆದ್ರೆ ಅಭಿಮಾನಿಗಳ ಪೇಜ್ FarhanAkhtarLive page ಡಿಲೀಟ್ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಇವರು ಯಾವ ಕಾರಣಕ್ಕೆ ಫೇಸ್ಬುಕ್ ಅಕೌಂಟ್ ಡಿಲೀಟ್ ಮಾಡ್ತಿದ್ದೇನೆ ಎಂಬುದನ್ನು ತಿಳಿಸಿಲ್ಲ. ಆದರೆ ಇವರು ಫೇಸ್ಬುಕ್ ಅಕೌಂಟ್ ಡಿಲೀಟ್ ಮಾಡಿದ್ದು ಅವರ ಅಭಿಮಾನಿಗಳಿಗೆ ಬೇಸರವನ್ನುಂಟುಮಾಡುವುದಂತು ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ