ಪ್ರಭಾಸ್ ಅವರ ಬಹುನಿರೀಕ್ಷಿತ ಮಾರುತಿ ನಿರ್ದೇಶನದ 'ದಿ ರಾಜಾ ಸಾಬ್' ಚಿತ್ರ ಬಿಡುಗಡೆ ವಿಳಂಬವಾಗಿದೆ. ಇದರಿಂದ ಭಾರೀ ಕುತೂಹಲದಿಂದ ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಸುಮಾರು ಮೂರು ವರ್ಷಗಳಿಂದ ಚಿತ್ರೀಕರಣ ನಡೆಯುತ್ತಿರುವ ಈ ಹಾರರ್-ರೊಮ್ಯಾಂಟಿಕ್ ಮನರಂಜನೆ ಚಿತ್ರವು ಆರಂಭದಲ್ಲಿ ಏಪ್ರಿಲ್ 10, 2025 ರಂದು ಬಿಡುಗಡೆಯಾಗಬೇಕಿತ್ತು. ಇನ್ನೂ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ಬಾಕಿ ಉಳಿದಿರುವುದರಿಂದ, ಸಿನಿಮಾದ ಬಿಡುಗಡೆಯನ್ನು ಮುಂದೂಡಲಾಗಿದೆ. ಇದುವರೆಗೆ ಸಿನಿಮಾದ ಹೊಸ ದಿನಾಂಕವನ್ನು ಚಿತ್ರತಂಡ ಘೋಷಿಸಿಲ್ಲ.
ಇತ್ತೀಚೆಗೆ, ನಿರ್ದೇಶಕ ಮಾರುತಿ ಅವರು ಆಂಧ್ರಪ್ರದೇಶದ ತಿರುಪತಿ ಮತ್ತು ಶ್ರೀಕಾಳಹಸ್ತಿ ದೇವಾಲಯಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಪ್ರಭಾಸ್ ಅಭಿಮಾನಿಗಳು ಸಿನಿಮಾದ ಬಗ್ಗೆ ಕೇಳಿದ್ದಾರೆ.
ನವೆಂಬರ್ ಅಥವಾ ಮುಂದಿನ ವರ್ಷ ಅಥವಾ ಯಾವಾಗ ಬೇಕಾದರೂ ಬರಲಿದೆ ಎಂದು ಮಾಧ್ಯಮಗಳ ಮೂಲಕ ಅಧಿಕೃತ ಮಾಹಿತಿಯನ್ನು ನೀಡಿ. ಅಭಿಮಾನಿಗಳು ನಿಮಗೆ ತೊಂದರೆ ಕೊಡುವುದಿಲ್ಲ ಎಂದಿದ್ದರು. ಇದೀಗ ಈ ತಿಂಗಳಲ್ಲಿ ಬಿಡುಗಡೆಗೊಳ್ಳಬೇಕಿದ್ದ ಸಿನಿಮಾ ಮತ್ತೇ ಮುಂದೂಡಲಾಗಿದೆ.
ಅಭಿಮಾನಿಗಳಲ್ಲಿ ತಾಳ್ಮೆಯಿಂದ ಕಾಯುವಂತೆ ನಿರ್ದೇಶಕರು ಕೇಳಿಕೊಂಡಿದ್ದಾರೆ.