Select Your Language

Notifications

webdunia
webdunia
webdunia
webdunia

ಸಂಜು ಸಿನಿಮಾ ಹಾಗೂ ಸಂಜಯ್ ದತ್ ರನ್ನು ವೈಭವೀಕರಿಸಬೇಡಿ ಎಂದಿದ್ದು ಯಾರು ಗೊತ್ತಾ?

ಸಂಜು ಸಿನಿಮಾ ಹಾಗೂ ಸಂಜಯ್ ದತ್ ರನ್ನು ವೈಭವೀಕರಿಸಬೇಡಿ ಎಂದಿದ್ದು ಯಾರು ಗೊತ್ತಾ?
ಮುಂಬೈ , ಶನಿವಾರ, 7 ಜುಲೈ 2018 (12:31 IST)
ಮುಂಬೈ : ಬಾಲಿವುಡ್ ನ ದುರಂತ ನಾಯಕ ಸಂಜಯ್ ದತ್ ಅವರ  ಜೀವನಾಧಾರಿತ ‘ಸಂಜು’ ಚಿತ್ರ ಈಗ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು. ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.  ಈ ನಡುವೆ ಇದೀಗ ಮಾಜಿ ಪೊಲೀಸ್ ಆಯುಕ್ತ, ಕೇಂದ್ರ ಸಚಿವ ಸತ್ಯ ಪಾಲ್ ಸಿಂಗ್ ಅವರು ಈ ಸಿನಿಮಾವನ್ನ ಹಾಗೂ ಸಂಜಯ್ ದತ್ ಅವರನ್ನ ವೈಭವೀಕರಿಸಬೇಡಿ ಎಂದು ತಿಳಿಸಿದ್ದಾರೆ.


ಈ ಸಿನಿಮಾ ದಲ್ಲಿ ನಿರ್ದೇಶಕರು  ನಟ ಸಂಜಯ್ ದತ್ ಅವರ ಜೀವನವನ್ನ ಯಥಾವತ್ತಾಗಿ ತೆರೆ ಮೇಲೆ ತಂದಿದ್ದಾರೆ. ಅದರಲ್ಲಿ ಜೈಲು ವಾಸ, ವೆಪನ್, ಹೀಗೆ ಎಲ್ಲವನ್ನ ತೋರಿಸಲಾಗಿದೆ. 1993 ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಸಂಜಯ್ ದತ್ ಅವರ ಬಂಧನವಾಗಿತ್ತು. ಹಾಗೇ ಸಂಜಯ್ ದತ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಎಕೆ-56 ರೈಫಲ್ ಹೊಂದಿದ್ದ ಅಪರಾಧ ಕೂಡ ಸಾಬೀತಾಗಿತ್ತು.

ಇದೇ ಪ್ರಕರಣದಲ್ಲಿ ಸಂಜಯ್ ದತ್ ಅವರಿಗೆ ಗೆ ಶಿಕ್ಷೆ ಕೂಡ ಆಗಿತ್ತು. ನಂತರ ಸಂಜಯ್ ದತ್ 2016 ರಲ್ಲಿ ಬಿಡುಗಡೆಯಾಗಿದ್ದರು. ಆದ್ರೆ ಇದನ್ನ ಸಿನಿಮಾದಲ್ಲಿ ತೋರಿಸಲಾಗಿದೆ. ಆದರೆ ಇದನ್ನ ವೈಭವಿಕರಣ ಮಾಡಲಾಗಿದೆ ಎಂದು  ಕೇಂದ್ರ ಸಚಿವರು ಹೇಳಿದ್ದಾರೆ.
ಸಿನಿಮಾಗಳಲ್ಲಿ ವೈಭವೀಕರಣ ಹೆಚ್ಚಾಗುತ್ತಿದ್ದು, ಅದನ್ನ ಕಡಿಮೆಮಾಡಬೇಕು. ಅಪರಾಧಿಯಾದವರು ಯಾರೇ ಇದ್ರು ಅದನ್ನ ವೈಭವೀಕರಿಸಬಾರದು. ಇನ್ನು ಅವರಿಷ್ಟದಂತೆ ಸಿನಿಮಾ ಮಾಡಬಹುದು ಹಾಗಂತ ವೈಭವೀಕರಿಸಬಾರದು ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಅಂಬರೀಶ್ ಸಾವಿನ ಮನೆಗೆ ಹೋಗುವುದಿಲ್ಲವಂತೆ. ಯಾಕೆ ಗೊತ್ತಾ?