Webdunia - Bharat's app for daily news and videos

Install App

ಮದುವೆಯ ಬಗ್ಗೆ ನಟಿ ತಮನ್ನಾ ಹೇಳಿದ್ದೇನು ಗೊತ್ತೇ?

Webdunia
ಭಾನುವಾರ, 29 ಜುಲೈ 2018 (07:03 IST)
ಹೈದರಾಬಾದ್ : ಮಿಲ್ಕಿ ಬ್ಯೂಟಿ ತಮನ್ನಾ ಬಾಟಿಯಾ ಅವರು ಶೀಘ್ರದಲ್ಲೆ ಅಮೆರಿಕದಲ್ಲಿರುವ ಎನ್‍ಆರ್‍ಐ ಡಾಕ್ಟರ್ ಒಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ  ಎಲ್ಲಾ ಕಡೆ ಹರಿದಾಡುತ್ತಿದೆ. ಈ ಸುದ್ದಿಯ ಬಗ್ಗೆ  ಇದೀಗ ನಟಿ ತಮನ್ನಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.


ನಟಿ ತಮನ್ನಾ ಅವರು  ತಮ್ಮ ಟ್ವೀಟರ್ ನಲ್ಲಿ ಟ್ವೀಟ್ ಮಾಡುವುದರ ಮೂಲಕ  ಅಮೆರಿಕದಲ್ಲಿರುವ ಎನ್‍ಆರ್‍ಐ ಡಾಕ್ಟರ್ ಜೊತೆ ತಮ್ಮ ಮದುವೆ ವಿಚಾರವನ್ನು ಅಲ್ಲಗೆಳೆದಿದ್ದಾರೆ. ಅಷ್ಟೇ ಅಲ್ಲದೇ ವಿನಾಕಾರಣ ತಮ್ಮ ಮದುವೆ ಬಗ್ಗೆ ಸುಳ್ಳುಸುದ್ದಿ ಹಬ್ಬಿಸಿದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 


‘ಒಂದು ದಿನ ನಟ, ಮತ್ತೊಂದು ದಿನ ಕ್ರಿಕೆಟರ್ ಈಗ ಡಾಕ್ಟರ್. ಈ ರೂಮರ್ಸ್ ಗಳನ್ನು ನೋಡಿದರೆ ನಾನೇನಾದರೂ ಗಂಡನನ್ನು ಹುಡುಕುವ ಅಮಲಿನಲ್ಲಿದ್ದೇನೆಯೇ ಎಂಬಂತೆ ನನಗೆ ಭಾಸವಾಗುತ್ತದೆ. ಈ ವದಂತಿಗಳನ್ನು ನಂಬಬೇಡಿ. ನಾನೀಗ ಸಿಂಗಲ್ ಆಗಿಯೇ ಇದ್ದೇನೆ. ನನ್ನ ಪೋಷಕರು ನನಗೆ ಯಾವ ವರನನ್ನು ಹುಡುಕುತಿಲ್ಲ. ಮುಂದೊಂದು ದಿನ ನಾನು ಮದುವೆಯಾಗುವಾಗ ನಾನೇ ನಿಮಗೆಲ್ಲ ತಿಳಿಸುತ್ತೇನೆ. ವಿನಾಕಾರಣ ಈ ರೀತಿ ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಕೊಡಬೇಡಿ.


ನನ್ನ ವಯಕ್ತಿಕ ಜೀವನದ ಬಗ್ಗೆ ಈ ರೀತಿ ಆಧಾರವಿಲ್ಲದ ರೂಮರ್ಸ್ ಗಳು ಹರಿದಾಡುವುದು ನನಗೆ ಖಂಡಿತ ಹಿಡಿಸುವುದಿಲ್ಲ. ನಾನೂ ಮತ್ತೊಮ್ಮೆ ಹೇಳುತ್ತಿದ್ದೇನೆ. ನನ್ನ ಮದುವೆ ಯಾರ ಜೊತೆಯೂ ನಿಶ್ಚಯವಾಗಿಲ್ಲ.  ಈ ಗಾಸಿಪ್ ಗಳೆಲ್ಲಾ ಕೆಲವೊಬ್ಬರ ಕಲ್ಪನೆ ಅಷ್ಟೇ ‘ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Renukaswamy murder case: ದರ್ಶನ್, ಪವಿತ್ರಾ ಗೌಡ ಅರೆಸ್ಟ್ ಆಗಿದ್ದು ಇದೇ ದಿನ

Rashmika Mandhana: ಚೆನ್ನೈಗೆ ಹೃದಯದಲ್ಲಿ ವಿಶೇಷ ಸ್ಥಾನವಿದೆ ಎಂದ ನ್ಯಾಷನಲ್ ಕ್ರಶ್‌

Kareena Kapoor: ವಯಸ್ಸು 44 ಆದ್ರೂ ಇನ್ನೂ ಬಳುಕುವ ಬಳ್ಳಿಯಂತಿರುವ ಕರೀನಾ ಕಪೂರ್‌ ಫಿಟ್‌ನೆಸ್ ಗುಟ್ಟು ಇದು

Deepika Padukone: ಅಪ್ಪನಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡ ದೀಪಿಕಾ ಪಡುಕೋಣೆ

Ramayana Film: ಇಂದ್ರ ದೇವನ ಪಾತ್ರಕ್ಕೆ ಆಯ್ಕೆಯಾದ ಕುನಾಲ್ ಲುಕ್‌ಗೆ ಫ್ಯಾನ್ಸ್‌ ಫಿದಾ

ಮುಂದಿನ ಸುದ್ದಿ
Show comments