ಪುರುಷರ ಬಗ್ಗೆ ನಟಿ ಕಾಜೋಲ್ ಏನು ಹೇಳಿದ್ರು ಗೊತ್ತಾ?

Webdunia
ಮಂಗಳವಾರ, 12 ಡಿಸೆಂಬರ್ 2023 (12:16 IST)
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಅಧೋಗತಿಗೆ ಇಳಿಯುತ್ತಿದೆ. ಅವರ ಬೆಳವಣಿಗೆ ಸ್ವಾತಂತ್ರಕ್ಕೆ, ಪುರಷ ಅಡ್ಡಿ ಆಗುತ್ತಿದ್ದಾನೆ. ಮಹಿಳೆ ಆಧುನಿಕವಾಗಿ ಬದುಕಲು ಪುರುಷ ಅವಕಾಶ ಮಾಡಿಕೊಡುತ್ತಿಲ್ಲ. ಈಗ ಗಂಡಸು ತನ್ನ ಮೈಂಡ್ ಸೆಟ್ ಬದಲಾಯಿಸಿಕೊಳ್ಳ ಬೇಕು ಎಂದು ಹೇಳಿರುವವರು ಬೇರೆ ಯಾರೂ ಅಲ್ಲ ಬಾಲಿವುಡ್ ಎವರ್ ಗ್ರೀನ್ ನಟಿ ಕಾಜೋಲ್.
 
ಆಕೆ ಕಳೆದ ವಾರ ದೆಹಲಿಯಲ್ಲಿ ವೊಡಾಫೋನ್ ಫೌಂಡೇಷನ್ ಸಂಸ್ಥೆ ಅವರ 'ವುಮೆನ್ ಆಫ್ ಪ್ಯೂರ್ ವಂಡರ್' ಪುಸ್ತಕ ಬಿಡುಗಡೆ ಮಾಡಿದ ಸಮಯದಲ್ಲಿ ಈ ಮಾತುಗಳನ್ನು ಹೇಳಿದರು. ಸಾಮಾನ್ಯವಾಗಿ ಮಹಿಳೆ ಪ್ರತಿಯೊಂದನ್ನು ಹೋರಾಟ ಮಾಡಿ ಪಡೆಯಬೇಕಾಗಿದೆ. ಆದರೂ ಆಕೆಗೆ ಸುಲಭವಾಗಿ ಗೆಲುವು ಸಿಗದು.
 
ಪುರುಷನ ಪರಿಸ್ಥಿತಿ ಇಲ್ಲಿ ತುಂಬಾ ಭಿನ್ನ. ಆತನಿಗೆ ಸುಲಭವಾಗಿ ಗೆಲುವು ದೊರಕುತ್ತದೆ. ಯಶಸ್ಸಿಗಾಗಿ ಸ್ತ್ರೀ ದೇವತೆಗಳನ್ನು ಪೂಜಿಸುವ ಗಂಡಸರು ತಮ್ಮ ಹೆಣ್ಣು ಮಕ್ಕಳನ್ನು ಕೊಲ್ಲುತ್ತಿದ್ದಾರೆ. ಮಹಿಳೆಯರು ಸ್ವಾಲಂಬಿಗಳಾಗಬೇಕಾದರೆ ಮೊದಲು ಪುರುಷರ ಧೋರಣೆ ಬದಲಾಗಬೇಕು. ಸ್ಥಳೀಯ ಪೊಲೀಸ್ ಠಾಣೆಗಳ ಕಾರ್ಯವೈಖರಿ-ವಾತಾವರಣದತ್ತಲೂ ಗಮನ ನೀಡುವುದು ಅತ್ಯಗತ್ಯ ಎಂದು ಈ ಸಂದರ್ಭದಲ್ಲಿ ಹೇಳಿದರು. 
 
ಅನೇಕ ಸಮಯಗಳಲ್ಲಿ ಪೊಲೀಸರು ಕೇಸ್ ಫೈಲ್ ಮಾಡಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ಈ ಸಮಯದಲ್ಲಿ ಆರೋಪ ಮಾಡಿದ್ದು ಕಾಜೋಲ್. 60 ಮಂದಿ ಹೆಣ್ಣುಮಕ್ಕಳ ಅಪರೂಪದ ಹೋರಾಟ ಅಂತಿಮವಾಗಿ ಅವರು ಗಳಿಸಿದ ಗೆಲುವಿನ ವಿವರಗಳನ್ನು ವುಮನ್ ಆಫ್ ಪ್ಯೂರ್ ವಂಡರ್ ಪುಸ್ತಕ ಹೊಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜಸ್ಟ್ ಫ್ರೆಂಡ್ಸ್ ಎನ್ನುತ್ತಲೇ ದಾಂಪತ್ಯ ಜೀವನಕ್ಕಿಡಲು ಸಜ್ಜಾದ ಮಾನಸ ಶಿವು ಜೋಡಿ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಮುಂದಿನ ಸುದ್ದಿ