ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳಿಂದ ಹಿಡಿದು ಕ್ರಿಕೆಟಿಗ ರೋಹಿತ್ ಶರ್ಮಾ ಮಕ್ಕಳವರೆಗೆ ಎಲ್ಲಾ ಸೆಲೆಬ್ರಿಟಿಗಳ ಮಕ್ಕಳು ಓದುವ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯ ಫೀಸ್ ಎಷ್ಟು ಗೊತ್ತಾ?
ಮುಂಬೈನ ಬಾಂದ್ರಾ ಪೂರ್ವ ನಗರದಲ್ಲಿರುವ ಶಾಲೆ ಧೀರೂಭಾಯಿ ಇಂಟರ್ನ್ಯಾಷನಲ್ ಸ್ಕೂಲ್. ಈ ಶಾಲೆಗೆ ಬರುವವರೆಲ್ಲರೂ ಪ್ರತಿಷ್ಠಿತರ ಮಕ್ಕಳೇ. ಶಾರುಖ್ ಖಾನ್ ಪುತ್ರ ಅಬ್ ರಾಮ್, ಸೈಫ್ ಆಲಿ ಖಾನ್ ಪುತ್ರರಾದ ತೈಮೂರು, ಜೆ, ಶಾಹಿದ್ ಕಪೂರ್ ಮಗಳು, ಐಶ್ವರ್ಯಾ ರೈ ಮಗಳು ಆರಾಧ್ಯ, ರಿತೇಶ್-ಜೆನಿಲಿಯಾ ಪುತ್ರರು, ಕ್ರಿಕೆಟಿಗ ರೋಹಿತ್ ಶರ್ಮಾ ಪುತ್ರಿ ಸಮೈರಾ ಸೇರಿದಂತೆ ಸೆಲೆಬ್ರಿಟಿಗಳ ಮಕ್ಕಲೆಲ್ಲರೂ ಓದುವುದು ಇದೇ ಶಾಲೆಯಲ್ಲಿ.
ಇಲ್ಲಿ ಇಂಟರ್ನ್ಯಾಷನಲ್ ಗುನಮಟ್ಟದ ವಿದ್ಯಾಭ್ಯಾಸ ನೀಡಲಾಗುತ್ತದೆ. ಈ ಶಾಲೆಯ ಪ್ರತಿಷ್ಠೆಯೇ ಅಂತಹದ್ದು. ಪ್ರತೀ ವರ್ಷ ಸ್ವತಃ ಅಂಬಾನಿ ಕುಟುಂಬವೇ ಮುಂದೆ ನಿಂತು ಶಾಲಾ ವಾರ್ಷಿಕೋತ್ಸವ ನಡೆಸಿಕೊಡುತ್ತದೆ. ಈ ಕಾರ್ಯಕ್ರಮಕ್ಕೆ ವಿಐಪಿಗಳ ದಂಡೇ ಬರುತ್ತದೆ.
ಈ ಶಾಲೆಯ ಶುಲ್ಕ ನಿಜಕ್ಕೂ ದುಬಾರಿ. ಎಲ್ ಕೆಜಿಯಿಂದ 7 ನೇ ತರಗತಿಯವರೆಗಿನ ಓದಿಗೆ 1.70 ಲಕ್ಷ ರೂ.ಗಳಷ್ಟು ಶುಲ್ಕ ನೀಡಬೇಕು. 8 ರಿಂದ 10 ನೇ ತರಗತಿವರೆಗಿನ ಮಕ್ಕಳಿಗೆ ಅಂದಾಜು 6 ಲಕ್ಷ ರೂ.ಗಳಷ್ಟು ಫೀಸ್ ಇದೆ. ಇನ್ನು ಪಿಯುಸಿ ತರಗತಿ ಓದುವವರಿಗೆ 9-10 ಲಕ್ಷ ರೂ.ಗಳಷ್ಟು ಫೀಸ್ ಇದೆ. ಸಾಮಾನ್ಯವಾಗಿ ಪ್ರತಿಷ್ಠಿತರ ಮಕ್ಕಳೇ ಈ ಶಾಲೆಗೆ ಬರುವ ಕಾರಣ ಅವರಿಗೆಲ್ಲಾ ಈ ಮೊತ್ತ ಹೆಚ್ಚೇನೂ ಅಲ್ಲ ಬಿಡಿ.