Select Your Language

Notifications

webdunia
webdunia
webdunia
webdunia

ಮನದ ಮಾತು ಬಿಚ್ಚಿಟ್ಟ ದೀಪಿಕಾ ಪಡುಕೋಣೆ

Deepika Padukone
mumbai , ಶುಕ್ರವಾರ, 15 ಡಿಸೆಂಬರ್ 2023 (11:47 IST)
ನನ್ನ ನಿಜ ಜೀವನದಲ್ಲೂ ತ್ರಿಕೋನ ಪ್ರೇಮಕಥೆ ನಡೆದಿದೆ. ಆದರೆ ಆ ಸನ್ನಿವೇಶದಲ್ಲಿ ನಾವು ಯಾವ ರೀತಿ ಅದನ್ನು ನಿಭಾಯಿಸುತ್ತೇವೆ ಅನ್ನೋದು ಬಹು ಮುಖ್ಯ ಅಂತಾ ಅವರು ಹೇಳಿದ್ದಾರೆ. ಒಂದು ವೇಳೆ ಇಬ್ಬರೂ ನಟಿಯರು ಉತ್ತಮ ಸ್ನೇಹಿತೆಯರಾಗಿದ್ದರೆ ಅವರ ನಡುವೆ ಪರಸ್ಪರ ಸಹಕಾರ ಒಬ್ಬರಿಗೊಬ್ಬರು ಗೌರವ ನೀಡೋದು ಬಹು ಮುಖ್ಯ ಎಂದು ಬಾಲಿವುಡ್ ಹಾಟ್ ನಟಿ ದೀಪಿಕಾ ಪಡುಕೋಣೆ ಹೇಳಿದ್ದಾರೆ.
 
ಇತ್ತೀಚೆಗೆ ಪ್ರತಕರ್ತರೊಬ್ಬರು ದೀಪಿಕಾ ಬಳಿ ಯಾವಾಗಲೂ ಇಬ್ಬರು ನಟಿಯರು ಉತ್ತಮ ಸ್ನೇಹಿತೆಯರಾಗಿ ಇರಲು ಸಾಧ್ಯವೇ ಅಂತಾ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ದೀಪಿಕಾ ನಾನು  ಯಾವತ್ತೂ ಯಾರೊಂದಿಗೂ ಸ್ಪರ್ಧಿಸಲು ಇಷ್ಟಪಡಲ್ಲ. ನನಗೆ ನಾನೇ ಸ್ಪರ್ಧಿ ಅಂತಾ ಜಾಣ್ಮೆಯ ಉತ್ತರ ನೀಡಿದ್ದಾರೆ.
 
ನಾನು ನನ್ನ ಅಭಿನಯವನ್ನು ಮತ್ತಷ್ಟು ಚೆನ್ನಾಗಿ ಮಾಡಲು ಯಾವಾಗಲೂ ಪ್ರಯತ್ನಿಸುತ್ತಲೇ ಇರುತ್ತೇನೆ. ನಾನು ತಮಾಷಾ ಸಿನಿಮಾ ಮಾಡುವಾಗಲೂ ಅಷ್ಟೇ ಹಿಂದಿನ ಪೀಕು ಸಿನಿಮಾಕ್ಕಿಂತ ಈ ಸಿನಿಮಾವನ್ನು ಚೆನ್ನಾಗಿ ಮಾಡಬೇಕು ಅಂದುಕೊಂಡು ಅಭಿನಯಿಸಿದ್ದೆ. ಭಾಜೀರಾವ್ ಮಸ್ತಾನಿ ಸಿನಿಮಾದಲ್ಲೂ ಅಭಿನಯಿಸುವಾಗ ಅಷ್ಟೇ ನು ನನ್ನ ಅಭಿನಯ ಎಷ್ಟು ಚೆನ್ನಾಗಿ ಮೂಡಿ ಬರಲು ಸಾಧ್ಯವೋ ಅಷ್ಟು ಪ್ರಯತ್ನ ಪಟ್ಟಿದ್ದೇನೆ ಅಂತಾ ದಿಪ್ಪಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಜಾಗದಲ್ಲಿ ನಾವ್ಯಾಕೆ ಹೆದರಬೇಕು? ಸಲಾರ್ ಗೆ ಟಾಂಗ್ ಕೊಟ್ಟ ದರ್ಶನ್