Publish Date: Mon, 31 Jan 2022 (10:10 IST)
Updated Date: Mon, 31 Jan 2022 (10:19 IST)
ಮುಂಬೈ: ನಟಿ ದೀಪಿಕಾ ಪಡುಕೋಣೆ ಈಗ ತಮ್ಮ ಗೆಹ್ರಾಯಿ ಸಿನಿಮಾ ಪ್ರಚಾರದಲ್ಲಿ ಬ್ಯುಸಿ. ಈ ನಡುವೆ ತಮ್ಮ ಗೆಳತಿ ಅಲಿಯಾ ಭಟ್ ಜೊತೆ ನಡೆದ ತಮಾಷೆಯ ಪ್ರಸಂಗವೊಂದನ್ನು ಅವರು ಹಂಚಿಕೊಂಡಿದ್ದಾರೆ.
ಸಿನಿಮಾ ಪ್ರಚಾರದ ಕಾರ್ಯಕ್ರಮದಲ್ಲಿ ದೀಪಿಕಾಗೆ ನೀವು ಅನಿವಾರ್ಯವಾದರೆ ಪುರುಷರ ಟಾಯ್ಲೆಟ್ ಬಳಸುತ್ಥೀರಾ ಎಂದು ಪ್ರಶ್ನೆ ಕೇಳಲಾಯ್ತು. ಇದಕ್ಕೆ ನಟ ಸಿದ್ಧಾಂತ್ ದೀಪಿಕಾ ಪುರುಷರ ಶೌಚಾಲಯ ಬಳಸಲ್ಲ ಎನ್ನುತ್ತಾರೆ.
ಆದರೆ ಮೈಕ್ ಪಡೆದುಕೊಳ್ಳುವ ದೀಪಿಕಾ ಹಿಂದೊಮ್ಮೆ ಬರ್ಲಿನ್ ಗೆ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ತಾವು ಮತ್ತು ಅಲಿಯಾ ಪುರುಷರ ಶೌಚಾಲಯ ಬಳಸಿದ ವಿಚಾರ ಬಹಿರಂಗಪಡಿಸಿದ್ದಾರೆ.