Publish Date: Sun, 14 Apr 2019 (05:33 IST)
Updated Date: Sun, 14 Apr 2019 (05:35 IST)
ಮುಂಬೈ: ನಟಿಯರು ಡೇಟಿಂಗ್ ನಡೆಸುತ್ತಿದ್ದಾರೆ ಎಂದರೆ ಮದುವೆ ಯಾವಾಗ ಎಂದು ಕೇಳುತ್ತಾರೆ. ಮದುವೆಯಾದ ತಕ್ಷಣವೇ ಅವರು ಪ್ರೆಗ್ನೆಂಟ್ ಎನ್ನುವ ರೂಮರ್ ಓಡಾಡುತ್ತದೆ.
ಈ ಫಜೀತಿ ದೀಪಿಕಾ ಪಡುಕೋಣೆಯನ್ನೂ ಬಿಟ್ಟಿಲ್ಲ. ದೀಪಿಕಾ ಮತ್ತು ರಣವೀರ್ ಸಿಂಗ್ ಕಳೆದ ನವಂಬರ್ ನಲ್ಲಿ ಮದುವೆಯಾಗಿದ್ದರು. ಇದೀಗ ಸಂದರ್ಶನವೊಂದರಲ್ಲಿ ದೀಪಿಕಾಗೆ ನೀವು ತಾಯಿಯಾಗುವುದು ಯಾವಾಗ ಎಂಬ ಪ್ರಶ್ನೆ ಎದುರಾಗಿದ್ದು, ಇದಕ್ಕೆ ದೀಪಿಕಾ ಉತ್ತರಿಸಿದ್ದಾರೆ.
‘ಮಗು ಯಾವಾಗ ಆಗಬೇಕೆಂದಿದೆಯೋ ಆವಾಗ ಆಗುತ್ತದೆ. ಆದರೆ ಮಹಿಳೆಯನ್ನು ಮದುವೆಯಾದ ಕೂಡಲೇ ಇದೇ ಪ್ರಶ್ನೆಯನ್ನೇ ಕೇಳುತ್ತಿರುವುದು ತಪ್ಪು. ಮಹಿಳೆಯರನ್ನು ಅದೇ ದೃಷ್ಟಿಯಲ್ಲಿ ನೋಡುವುದು ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ’ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ